ದಕ್ಷಿಣಕನ್ನಡ : ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಆರೋಪಿ ಚಿನ್ನಯ್ಯನ ಜಾಮೀನು ಅರ್ಜಿ ವಜಾ ಗೊಳಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಜೆಎಂಎಫ್ ಸಿ ಕೋರ್ಟ್ ಆರೋಪಿ ಚಿನ್ನಯ್ಯ ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವ ವಿಚಾರವಾಗಿ ಆರೋಪಿ ಚಿನ್ನಯ್ಯ ಬಂಧನ ವಿಚಾರವಾಗಿ ಬುರುಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ತನಿಖೆ ನಡೆಸುತ್ತಿದ್ದು, ಈಗಲೂ ಸಹ ತನಿಖೆ ಮುಂದುವರೆದಿದೆ. ಇಂತಹ ಸಮಯದಲ್ಲಿ ಜಾಮೀನು ಕೊಟ್ಟರೆ ಮುಂದೆ ತನಿಖೆಗೆ ಸಮಸ್ಯೆ ಆಗುತ್ತದೆ ಎಂದು ಎಸ್ಐಟಿ ಕೋರಿಕೆಯಾಗಿತ್ತು . ಇದೆ ವಿಚಾರವನ್ನು ಜಡ್ಜ್ ಮುಂದೆ ಇಟ್ಟಿದ್ದರು. ಹಾಗಾಗಿ ಆರೋಪಿ ಚೆನ್ನಯ್ಯನ ಜಾಮೀನು ರದ್ದುಗೊಳಿಸಿದೆ. ಸದ್ಯ ಶಿವಮೊಗ್ಗದ ಜೈಲಲ್ಲಿ ಚಿನ್ನಯ್ಯ ಇದ್ದಾನೆ.