ಬೆಂಗಳೂರು : ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅಭಿಮಾನಿಗಳು ಜನ್ಮ ದಿನಾಚರಣೆ ಮಾಡಲು ಸಿದ್ಧತೆಯಲ್ಲಿದ್ದರು. ಆದರೆ ಹೈಕೋರ್ಟ್ ಇದೀಗ ಡಾಕ್ಟರ್ ವಿಷ್ಣುವರ್ಧನ್ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದೆ. ಸೆಪ್ಟೆಂಬರ್ 18ರಂದು ಡಾಕ್ಟರ್ ವಿಷ್ಣುವರ್ಧನ್ ಜನ್ಮ ದಿನಾಚರಣೆಗೆ ಅವಕಾಶ ನೀಡಲು ಹೈಕೋರ್ಟ್ ನಕಾರ ವ್ಯಕ್ತಪಡಿಸಿದೆ.
ವಿಷ್ಣುವರ್ಧನ್ ಪುಣ್ಯ ಭೂಮಿ ಟ್ರಸ್ಟ್ (ರಿ) ರಿಟ್ ಅರ್ಜಿ ಸಲ್ಲಿಸಿತ್ತು. ಅಭಿಮಾನಿ ಸ್ಟುಡಿಯೋ ಮಾಲೀಕತ್ವದ ಬಗ್ಗೆ ಹೈಕೋರ್ಟ್ ಆದೇಶವಿದೆ. 2025 ಜನವರಿ 13 ಆದೇಶದ ಇರುವಾಗ ವಿಭಿನ್ನ ರೀತಿಯ ಆದೇಶ ಸಾಧ್ಯವಿಲ್ಲ ಎಂದು ನ್ಯಾ. ಬಿ.ಎಂ ಶ್ಯಾಮ್ ಪ್ರಸಾದ್ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ. ಅಭಿಮಾನಿ ಜನ್ಮದಿನಾಚರಣೆಗೆ ಹೈಕೋರ್ಟ್ ಅವಕಾಶ ನೀಡಲು ನಿರಾಕರಿಸಿದೆ.
ಅರ್ಜಿ ಸಂಬಂಧ ರಾಜ್ಯ ಸರ್ಕಾರ, ಮತ್ತು ಡಿಸಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ವಿಷ್ಣುವರ್ಧನ್ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ಹಾಗು ಅಭಿಮಾನ್ ಸ್ಟುಡಿಯೋದ ಬಿ ಎಸ್ ಕಾರ್ತಿಕ್ ಅವರಿಗೆ ನೋಟಿಸ್ ಜಾರಿಗೆ ಹೈಕೋರ್ಟ್ ಇದೇ ಸಂದರ್ಭದಲ್ಲಿ ಸೂಚನೆ ನೀಡಿ ವಿಚಾರಣೆಯನ್ನು ನವೆಂಬರ್ 4ಕ್ಕೆ ಮುಂದೂಡಿತು.a