ಶಿವಮೊಗ್ಗ : ಶಿವಮೊಗ್ಗದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಕಾರು ಉರುಳಿ ಬಿದ್ದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ವೃದ್ದೆ ಸ್ಥಳದಲ್ಲಿ ಸಾವ್ಕಾನ್ನಪ್ಪಿದ್ದು, ಉಳಿದ ಇಬ್ಬರು ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ.
ಮೃತ ವೃದ್ದೆಯನ್ನು ಪಾರ್ವತಮ್ಮ ಎಂದು ತಿಳಿಬಂದಿದೆ. ಚಿಪ್ಪಿಗರ ಬಳಿ ಮಾರುತಿ ಬಲೇನೋ ಕಾರು ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದೆ. ಶಿವಮೊಗ್ಗದ ಹೊಸನಗರ ತಾಲೂಕಿನ ಚಿಪ್ಪಿಗರ ಎನ್ನುವ ಗ್ರಾಮದಲ್ಲಿ ಈ ಒಂದು ಅಪಘಾತ ಸಂಭವಿಸಿದೆ. ತ್ಯಾಗತಿಯ ಅಮ್ಮನಘಟ್ಟ ಜೇನುಕಲ್ಲಮ್ಮ ದೇವರ ದರ್ಶನಕ್ಕೆ ಹೋಗಿದ್ದರು ದೇವಸ್ಥಾನದಿಂದ ಬರುವಾಗ ನಿಯಂತ್ರಣ ತಪ್ಪಿ ಕಾರು ಕೆರೆಗೆ ಬಿದ್ದಿದೆ.
ಈ ವೇಳೆ ತಕ್ಷಣ ಇಬ್ಬರೂ ಕಾರಿನಿಂದ ಹೊರಗಡೆ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ ಕಾರಿನಲ್ಲಿದ್ದ ವೃದ್ದೆ ಪಾರ್ವತಮ್ಮ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.ಮಂಜುನಾಥ್ ಮತ್ತು ಅಕ್ಷತ ಗೆ ಚಿಕಿತ್ಸೆ ನೀಡಲಾಗುತ್ತಿದ್ದು. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವೃದ್ದೆ ಪರ್ವತಮ್ಮ ಮೃತದೇಹ ರಿಬ್ಬನ್ ಪೇಟೆ ಆಸ್ಪತ್ರೆಯ ಶವಾಗಾರದಲ್ಲಿದೆ.