ಬೆಂಗಳೂರು : ಕ್ರಿಶ್ಚಿಯನ್ ಕಾಲಂನಲ್ಲಿ ಹಿಂದೂ ಜಾತಿಗೆ ಸೇರ್ಪಡೆಗೆ ಆಕ್ರೋಶ ವ್ಯಕ್ತವಾಗಿದ್ದು, ರಾಜ್ಯಪಾಲರಿಗೆ ಇದೀಗ ಬಿಜೆಪಿ ನಾಯಕರ ನಿಯೋಗ ದೂರು ನೀಡಿದೆ. ದುಂಡುಮೇಜಿನ ಸಭೆಯ ಬಳಿಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರಿಗೆ ದೂರು ಸಲ್ಲಿಸಿದೆ.
ಇಂದು ಬಿಜೆಪಿ ನಾಯಕರ ನಿಯೋಗ ಖಾಸಗಿ ಹೋಟೆಲ್ ನಲ್ಲಿ ದುಂಡುಮೇಜಿನ ಸಭೆ ನಡೆಸಿತು. ಬಳಿಕ ರಾಜ ಭವನಕ್ಕೆ ಪಾದಯಾತ್ರೆ ಮೂಲಕ ಬಿಜೆಪಿ ನಿಯೋಗದ ನಾಯಕರು ರಾಜಭವನಕ್ಕೆ ಆಗಮಿಸಿ, ಬಿಜೆಪಿ ಸಂಸದ ಯದುವೀರ್ ಒಡೆಯರ್, ಪಿ ಸಿ ಮೋಹನ್, ಶಾಸಕ ಸುನಿಲ್ ಕುಮಾರ್ ಎಂಎಲ್ಸಿ ಎನ್ ರವಿ ಕುಮಾರ್ ಪಾದಯಾತ್ರೆ ಮೂಲಕ ರಾಜಭವನಕ್ಕೆ ಆಗಮಿಸಿ ರಾಜ್ಯಪಾಲರಿಗೆ ದೂರು ನೀಡಿದರು.
ಇಂದು ಖಾಸಗಿ ಹೋಟೆಲ್ ನಲ್ಲಿ ನಡೆದ ಬಿಜೆಪಿ ನಾಯಕರ ದುಂಡು ಮೇಜಿನ ಸಭೆಯಲ್ಲಿ 6 ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡಿತು.
1) ಕಾಲಂನಲ್ಲಿ ಸೇರಿಸಿರೋ ಕ್ರಿಶ್ಚಿಯನ್ ಹೆಸರು ತೆಗೆಯಬೇಕು
2) ಹೊಸದಾಗಿ ಸೇರಿಸಿದ 47 ಹೆಸರು ಕೈಬಿಡಬೇಕು
3) ಕ್ರಿಶ್ಚಿಯನ್ ಹೆಸರಿದ್ದರೆ ಮೀಸಲಾತಿ ಏರುಪೇರು ಆಗುತ್ತದೆ. ಅದನ್ನು ಕೈ ಬಿಡಬೇಕು
4) ಮತಾಂತರಕ್ಕೆ ಸರ್ಕಾರವೇ ಪ್ರೇರಣೆ ಕೊಡುತ್ತಿದೆ.
5) ಜಾತಿ ಗಣತಿ ಸಮೀಕ್ಷೆ ಬೇಸಿಗೆ ರಜೆಯಲ್ಲಿ ಮಾಡಬೇಕು.
6) ಕ್ರಿಶ್ಚಿಯನ್ ಸೇರಿಸಿದರೆ ಮೀಸಲಾತಿ ನೀಡಬಾರದು ಎಂದು ನಿರ್ಣಯ ತೆಗೆದುಕೊಂಡಿದೆ.