ಬೆಂಗಳೂರು : ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ ಶಿಪ್ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯ ವೇಳೆ ಟೌನ್ ಶಿಪ್ ಯೋಜನೆ ವಿರೋಧಿಸಿ ನಾಲ್ವರು ರೈತರು ವಿಷ ಸೇವಿಸಿರುವ ಘಟನೆ ವರದಿಯಾಗಿದೆ.ಬೈರಮಂಗಲ ಬಳಿ ಪ್ರತಿಭಟನೆ ವೇಳೆ ನಾಲ್ವರ ರೈತರು ವಿಷ ಸೇವಿಸಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಬೈರಮಂಗಲ ಬಳಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರಾದ ಕುಮಾರ್, ಶ್ರೀಧರ್, ಸೌಮ್ಯ ಹಾಗೂ ಶಾರದಾ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಪಕ್ಷ ನಾಯಕರಾದ ಆರ್.ಅಶೋಕ, ಶಾಸಕ ಅಶ್ವತ್ಥ ನಾರಾಯಣ ಎದುರೇ, ರೈತರು ವಿಷಯ ಸೇವಿಸಿದ್ದಾರೆ. ವಿಷ ಸೇವಿಸುತ್ತಿದ್ದ ರೈತರನ್ನು ಇತರೆ ಪ್ರತಿಭಟನಾಕಾರರು ತಕ್ಷಣ ತಡೆದಿದ್ದಾರೆ.