ಗುಜರಾತ್ : ಸುಪ್ರೀಂ ಕೋರ್ಟ್ ನೇಮಿಸಿದ್ದ ವಿಶೇಷ ತನಿಖಾ ತಂಡದ (ಎಸ್ ಐಟಿ) ವರದಿ ಆಧಾರದ ಮೇಲೆ ನ್ಯಾಯಮೂರ್ತಿಗಳು ಸೋಮವಾರ ನೀಡಿದ ತೀರ್ಪಿನ ಬಗ್ಗೆ ವಂತಾರ ತಂಡದಿಂದ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ.
“ಗೌರವಾನ್ವಿತ ಸುಪ್ರೀಂ ಕೋರ್ಟ್ ನೇಮಿಸಿದ ವಿಶೇಷ ತನಿಖಾ ತಂಡದ (SIT) ಅಂಶಗಳನ್ನು ನಾವು ಅತ್ಯಂತ ನಮ್ರತೆ ಹಾಗೂ ಕೃತಜ್ಞತೆಯಿಂದ ಸ್ವಾಗತಿಸುತ್ತೇವೆ. ವಂತಾರದ ಪ್ರಾಣಿ ಕಲ್ಯಾಣ ಧ್ಯೇಯದ ವಿರುದ್ಧ ವ್ಯಕ್ತಪಡಿಸಿದಂಥ ಅನುಮಾನಗಳು ಹಾಗೂ ಆರೋಪಗಳು ಯಾವುದೇ ಆಧಾರ ಇಲ್ಲದಂಥದ್ದು ಎಂದು ಎಸ್ಐಟಿ ವರದಿ ಮತ್ತು ಸುಪ್ರೀಂ ಕೋರ್ಟ್‌ನ ಆದೇಶ ಸ್ಪಷ್ಟಪಡಿಸಿದೆ. ಎಸ್ಐಟಿಯ ಗಣ್ಯ ಮತ್ತು ಗೌರವಯುತ ಸದಸ್ಯರಿಂದ ಸತ್ಯದ ದೃಢೀಕರಣವು ವಂತಾರದಲ್ಲಿರುವ ಎಲ್ಲರಿಗೂ ಸಮಾಧಾನವನ್ನು ನೀಡುವುದಲ್ಲದೆ, ಇದು ಆಶೀರ್ವಾದ ಸಹ ಆಗಿದೆ, ಏಕೆಂದರೆ ಅದು ಸ್ವತಃ ನಮ್ಮ ಕೆಲಸವೇ ಮಾತನಾಡುವುದಕ್ಕೆ ಅನುವು ಮಾಡಿಕೊಡುತ್ತದೆ.
ತಮಗಾಗಿ ಧ್ವನಿ ಎತ್ತುವುದಕ್ಕೆ ಸಾಧ್ಯವಾಗದವರಿಗೆ ವಿನಮ್ರತೆ ಮತ್ತು ಭಕ್ತಿಯಿಂದ ಸೇವೆ ಸಲ್ಲಿಸುವುದನ್ನು ಮುಂದುವರಿಸಲು ಎಸ್ಐಟಿ ಕಂಡುಕೊಂಡಂಥ ಅಂಶಗಳು ಹಾಗೂ ಸುಪ್ರೀಂ ಕೋರ್ಟ್‌ನ ಆದೇಶವು ನಮಗೆ ಮತ್ತಷ್ಟು ಶಕ್ತಿ ಮತ್ತು ಪ್ರೋತ್ಸಾಹವನ್ನು ನೀಡುತ್ತದೆ. ಇಡೀ ವಂತಾರ ಕುಟುಂಬವು ಈ ಖಾತ್ರಿಗಾಗಿ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ ಮತ್ತು ಪ್ರಾಣಿಗಳು ಹಾಗೂ ಪಕ್ಷಿಗಳನ್ನು ಸಹಾನುಭೂತಿಯಿಂದ ರಕ್ಷಿಸುವುದಕ್ಕೆ ಮತ್ತು ನೋಡಿಕೊಳ್ಳುವುದಕ್ಕೆ ನಮ್ಮ ಜೀವಮಾನದ ಬದ್ಧತೆಯ ಬಗ್ಗೆ ಎಲ್ಲರಿಗೂ ಭರವಸೆ ನೀಡುತ್ತದೆ.
ನಮ್ಮಲ್ಲಿರುವ ಧ್ವನಿಯಿಲ್ಲದವರ ಬಗ್ಗೆ ವಂತಾರವು ಯಾವಾಗಲೂ ಪ್ರೀತಿ, ಸಹಾನುಭೂತಿ ಮತ್ತು ಜವಾಬ್ದಾರಿ ಇರಿಸಿಕೊಂಡಿದೆ. ನಾವು ರಕ್ಷಿಸುವ ಪ್ರತಿಯೊಂದು ಪ್ರಾಣಿ, ನಾವು ಗುಣಪಡಿಸುವ ಪ್ರತಿಯೊಂದು ಪಕ್ಷಿ, ನಾವು ಉಳಿಸುವ ಪ್ರತಿ ಜೀವವು ಅದನ್ನು ನೆನಪಿಸುತ್ತದೆ. ಅವುಗಳ ಯೋಗಕ್ಷೇಮವು ನಮ್ಮಿಂದ ಪ್ರತ್ಯೇಕವಾಗಿಲ್ಲ – ಅದು ಎಲ್ಲ ಮಾನವೀಯತೆಯ ಯೋಗಕ್ಷೇಮದ ಬೇರ್ಪಡಿಸಲಾಗದ ಭಾಗವಾಗಿದೆ. ನಾವು ಪ್ರಾಣಿಗಳ ಕಾಳಜಿ ವಹಿಸುವಾಗ, ನಾವು ಮಾನವೀಯತೆಯ ಆತ್ಮದ ಕಾಳಜಿ ಸಹ ವಹಿಸುತ್ತೇವೆ.
ಈ ಸಂದರ್ಭದಲ್ಲಿ ನಾವು ಭಾರತ ಸರ್ಕಾರ, ರಾಜ್ಯ ಸರ್ಕಾರಗಳು ಹಾಗೂ ಪ್ರಾಣಿಗಳ ಆರೈಕೆಯ ಬೃಹತ್ ಮತ್ತು ಸವಾಲಿನ ಕಾರ್ಯದಲ್ಲಿ ಭಾಗಿ ಆಗಿರುವ ಎಲ್ಲ ಇತರ ಪಾಲುದಾರರೊಂದಿಗೆ ನಮ್ಮ ಒಗ್ಗಟ್ಟಿನ ಪ್ರತಿಜ್ಞೆಯನ್ನು ಮಾಡುತ್ತೇವೆ ಮತ್ತು ವಂತರಾ ಯಾವಾಗಲೂ ಅವರ ಜೊತೆ ನಿಕಟ ಸಹಯೋಗದೊಂದಿಗೆ ಕೆಲಸ ಮಾಡಲು ಸಿದ್ಧವಾಗಿರುತ್ತದೆ ಎಂದು ದೃಢೀಕರಿಸುತ್ತೇವೆ. ಒಟ್ಟಾಗಿ ಭೂಮಿ ತಾಯಿಯನ್ನು ಎಲ್ಲ ಜೀವಿಗಳಿಗೆ ಉತ್ತಮ ಸ್ಥಳವನ್ನಾಗಿ ಮಾಡೋಣ ಎಂದಿದೆ.
ಭಾರತದಲ್ಲಿ ಶೇ.60ರಷ್ಟು ಸಾವು ಜೀವನಶೈಲಿ ಕಾಯಿಲೆಗಳಿಂದ ಸಂಭವ: ಡಾ.ಸಿ.ಎನ್.ಮಂಜುನಾಥ್
ಮಾನವೀಯತೆ ಮೆರೆದ ಜಡ್ಜ್: ವೃದ್ಧನ ಬಳಿ ತೆರಳಿ ತೀರ್ಪು, ಸ್ಥಳದಲ್ಲೇ ಪರಿಹಾರಕ್ಕೆ ಆದೇಶ







