ಬೆಂಗಳೂರು : ವರನಟ ಡಾ. ರಾಜಕುಮಾರ್ ಬಗ್ಗೆ ಅವಹೇಳನಕಾರಿ ಹೇಳಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಸಿಸಿಬಿ ಪೊಲೀಸರು ವಿನೋದ ಶೆಟ್ಟಿ ಎಂಬ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಡಾ.ರಾಜಕುಮಾರ್ ಹಾಗೂ ಅವರ ಕುಟುಂಬದವರ ಬಗ್ಗೆ ಆವಾಚ್ಯವಾಗಿ ನಿಂದನೆ ಮಾಡಿ ಮಾತನಾಡಿದ್ದ. ಬಾಯಿಗೆ ಬಂದಂತೆ ಮಾತನಾಡಿ ತಾಕತ್ತಿದ್ದರೆ ಬನ್ನಿ ಅಂತ ವಿನೋದ ಶೆಟ್ಟಿ ಅವಾಜ್ ಹಾಕಿದ್ದ. ಇದೀಗ ಬೆಂಗಳೂರಿನ ಸಿಸಿಬಿ ಪೊಲೀಸರು ಆರೋಪಿ ವಿನೋದ್ ಶೆಟ್ಟಿಯನ್ನ ಅರೆಸ್ಟ್ ಮಾಡಿದ್ದಾರೆ.