ಕೋಲಾರ : ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಲ್ಲಪ್ಪನಹಳ್ಳಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಲ್ಲಪ್ಪನಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದ್ದು, ಶವ ಸಂಸ್ಕಾರಕ್ಕೆ ಬಾಲಕಿಯ ಶವ ತೆಗೆದುಕೊಂಡ ಹೋದಾಗ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಬಾಲಕಿಯ ಶವ ಶಿಫ್ಟ್ ಮಾಡಿದ್ದಾರೆ.
ಹೌದು ಶವ ಸಂಸ್ಕಾರಕ್ಕೆ ಪೋಷಕರು ಮತ್ತು ಸಂಬಂಧಿಕರು ಕೊಂಡೊಯ್ದಿದ್ದರು. ಸ್ಮಶಾನದಲ್ಲಿ ಶವ ಸಂಸ್ಕಾರ ವೇಳೇ ಪೊಲೀಸರು ತಡೆದು ಶವಾಗಾರಕ್ಕೆ ಶಿಫ್ಟ್ ಮಾಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಅರ್ಚನಾ (17) ಎನ್ನುವ ಬಾಲಕಿಯ ಶವ ಶಿಫ್ಟ್ ಮಾಡಲಾಯಿತು. ಪೊಲೀಸರು ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.