ಹುಬ್ಬಳ್ಳಿ: ಧರ್ಮಸ್ಥಳ ಪ್ರಕರಣದ ಹಿಂದೆ ಈಗಾಗಲೇ ಯಾರು ಯಾರು ಇದ್ದಾರೆ ಎಂಬುದಾಗಿ ಸಾಕ್ಷಿದಾರ ನಾಲ್ಕೈದು ಮಂದಿ ಹೆಸುರ ಹೇಳಿದ್ದಾರೆ. ಆದರೇ ಈವರೆಗೆ ಅವರನ್ನು ಬಂಧಿಸಿಲ್ಲ. ಧರ್ಮಸ್ಥಳ ಪ್ರಕರಣದ ಹಿಂದೆ ರಾಜ್ಯ ಕಾಂಗ್ರೆಸ್ ಸರ್ಕಾರದ ಷಡ್ಯಂತ್ರವಿದೆ ಎಂಬುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ ಕ್ಷೇತ್ರದ ಬಗ್ಗೆ ಹೇಗೆ ಬೇಕೋ ಹಾಗೆ ತೇಜೋವಧೆ ಮಾಡಿದ್ದಾರೆ. ಬುರುಡೆ ತಂದುಕೊಡ್ಡವರು, ಪ್ರಕರಣದ ಹಿಂದೆ ಯಾರು ಯಾರು ಇದ್ದಾರೆ ಎಂದು ಮುಸುಕುಧಾರಿ ಹೇಳಿಕೆಯಲ್ಲೇ ನೀಡಿದ್ದಾನೆ ಎಂದರು.
ಮುಸುಕುಧಾರಿಯ ಹೇಳಿಕೆಯಿಂದಾಗಿ ಧರ್ಮಸ್ಥಳ ಪ್ರಕರಣದ ಹಿಂದೆ ಇರುವವರನ್ನು ಬಂಧಿಸಬೇಕಿತ್ತು. ಆದರೇ ಅವರನ್ನು ಬಂಧಿಸದೇ ವ್ಯವಸ್ಥಿತವಾಗಿ ಕೇಸ್ ಮುಚ್ಚಿಹಾಕಲು ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಯತ್ನಿಸುತ್ತಿದೆ ಎಂಬುದಾಗಿ ಕಿಡಿಕಾರಿದರು.
ಮೃತ ವ್ಯಕ್ತಿಯ ಹೂತ ಶವ ಹೊರ ತೆಗೆಯೋದಕ್ಕೆ ಕೋರ್ಟ್ ಅನುಮತಿ ಬೇಕು. ಆದರೇ ಧರ್ಮಸ್ಥಳ ಕೇಸಲ್ಲಿ ಅದು ಯಾವುದನ್ನೂ ಪಾಲಿಸದೇ ಬೇಕಾಬಿಟ್ಟಿಯಾಗಿ ಹತ್ತಕ್ಕೂ ಹೆಚ್ಚು ಕಡೆ ಅಗೆದು ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಎಲ್ಲೂ ಶವದ ಕುರುಹು ಸಿಕ್ಕಿಲ್ಲ. ಸಾಕ್ಷಿ ದೂರುದಾರ ಕೆಲವು ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದಾನೆ. ಇದರ ಹಿಂದೆ ಹೊರ ರಾಜ್ಯದವರ ಕೈವಾಡವಿದ್ದು, ಸರ್ಕಾರ ಅದರ ಭಾಗವಾಗಿದೆ ಎಂಬುದಾಗಿ ಗಂಭೀರ ಆರೋಪ ಮಾಡಿದರು.
ಮಾಜಿ ಸಚಿವ ಪ್ರಭು ಚೌವ್ಹಾಣ್ ಗೆ ಅಶ್ಲೀಲ ವೀಡಿಯೋ ಕಳುಹಿಸಿ ಹಣಕ್ಕೆ ಬೇಡಿಕೆಯಿಟ್ಟ ಆರೋಪಿ ಅರೆಸ್ಟ್