ಹಾಸನ : ನಿನ್ನೆ ಹಾಸನದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು, ಗಣೇಶ ಮೆರವಣಿಗೆಯ ವೇಳೆ ನಿಯಂತ್ರಣ ಕಳೆದುಕೊಂಡ ಕ್ಯಾಂಟರ್ ಒಂದು ಏಕಾಏಕಿ ನುಗ್ಗಿದೆ ಈ ಒಂದು ಘಟನೆ ಹಿನ್ನೆಲೆ 9 ಜನರು ಸಾವನ್ನಪ್ಪಿದ್ದು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಅದರಲ್ಲೂ ಮೃತಪಟ್ಟರಲ್ಲಿ ಆರು ಜನ ವಿದ್ಯಾರ್ಥಿಗಳೇ ಆಗಿದ್ದು, ಇನ್ನು ಉಳಿದ ನಾಲ್ವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ 17 ಜನರಿಗೆ ಜನರಲ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕ್ಯಾಂಟರ್ ಹರಿದ ಘಟನೆ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ ಭೇಟಿ ನೀಡಿದ್ದಾರೆ. ಶಾಂತಿಗ್ರಾಮದಿಂದ ದುರಂತ ನಡೆದ ಸ್ಥಳಕ್ಕೆ ಕೃಷ್ಣಭರೇಗೌಡ ಭೇಟಿ ನೀಡಿದ್ದು ದುರಂತ ನಡೆದ ಸ್ಥಳವನ್ನು ಸಚಿವರು ಪರಿಶೀಲನೆ ಮಾಡಿದರು. ಪರಿಶೀಲನೆಯ ಬಳಿಕ ಸಚಿವರು ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ.