ಬೆಂಗಳೂರು : ಬೆಂಗಳೂರಿನಲ್ಲಿ ಕ್ಯಾಂಟರ್ ಡಿಕ್ಕಿಯಾಗಿ ಆಟೋದಲ್ಲಿ ಇದ್ದಂತಹ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಸುಮ್ಮನಹಳ್ಳಿಯ ಜಂಕ್ಷನ್ ರಸ್ತೆಯಲ್ಲಿ ನಡೆದಿದೆ. ಆಟೋ, ಕಾರಿಗೆ ಕ್ಯಾಂಟರ್ ಡಿಕ್ಕಿಯಾಗಿ ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನಪ್ಪಿದ್ದಾರೆ.
ಆಟೋದಲ್ಲಿದ್ದ ಡಿಯೇಸು ಹಾಗೂ ಜನಿಫರ್ ಅವರು ಸ್ಥಳದಲ್ಲಿ ಸಾವನಪ್ಪಿದ್ದು, ಇನ್ನೂ ಕಾರಿನಲ್ಲಿ ಇದ್ದವರಿಗೆ ಗಂಭೀರವಾದ ಗಾಯಗಳಾಗಿವೆ. ಕೊಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕ್ಯಾಂಟರ್ ಡಿಕ್ಕಿ ಆದ ರಭಸಕ್ಕೆ ಆಟೋ ಎರಡು ತುಂಡುಗಳಾಗಿದ್ದು, ಲಾರಿ ಬ್ರೇಕ್ ಫೇಲ್ ಆಗಿ ಅಪಘಾತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.