ಬೆಂಗಳೂರು: ನಾನು ಮುಸ್ಲೀಂ ಆಗಿರೋ ಒಂದೇ ಒಂದು ಕಾರಣದಿಂದ ನನಗೆ ಟೆರರಿಸ್ಟ್ ಗಳಿಂದ, ಇಸ್ಲಾಂ ಸಮುದಾಯದಿಂದ ನನ್ನ ಖಾತೆಗೆ ಹಣ ಬಂದಿದೆ ಎಂಬುದಾಗಿ ಆರೋಪಿಸಲಾಗುತ್ತಿದೆ. ಆದರೇ ಇದೆಲ್ಲವೂ ಸುಳ್ಳು. ನನಗೆ ಒಂದೇ ಒಂದು ರೂಪಾಯಿ ಆ ರೀತಿಯ ಹಣ ಬಂದಿಲ್ಲ ಎಂಬುದಾಗಿ ಯೂಟ್ಯೂಬರ್ ಸಮೀರ್.ಎಂ.ಡಿ ಸ್ಪಷ್ಟ ಪಡಿಸಿದ್ದಾರೆ.
ಇಂದು ತಮ್ಮ ಇನ್ಸ್ ಸ್ಟಾಗ್ರಾಮ್ ನಲ್ಲಿ ಹೊಸ ವೀಡಿಯೋ ಬಿಡುಗಡೆ ಮಾಡಿರುವಂತ ಅವರು, ನಾನು ಸೌಜನ್ಯ ಪರವಾಗಿ ನಿಂತಾಗಿನಿಂದ ಒಂದಿಲ್ಲೊಂದು ಆರೋಪಗಳನ್ನು ಎದುರಿಸುತ್ತಿದ್ದೇನೆ. ಅವತ್ತು ಹೇಳಿದ್ದೆ, ಇವತ್ತು ಹೇಳ್ತಾ ಇದ್ದೇನೆ. ನನಗೆ ಯಾವುದೇ ರೀತಿಯ ಫಂಡ್ ಬಂದಿಲ್ಲ. ಹಾಗೆ ನಾನು ದುಡ್ಡು ತೆಗೆದುಕೊಂಡು ವೀಡಿಯೋ ಮಾಡಿದ್ದರೇ ಪೊಲೀಸರ ತನಿಖೆಯಲ್ಲಿ ಇಷ್ಟೊತ್ತಿಗೆ ಹೊರಗೆ ಬಂದಿರೋದಲ್ವ? ಇದಕ್ಕೆ ಕಾರಣ ನಾನು ಮುಸ್ಲೀಂ ಆಗಿರೋದು ಎಂದು ಹೇಳಿದ್ದಾರೆ.
ಪೊಲೀಸರ ಬಳಿಯಲ್ಲಿ ನನ್ನ ಆಧಾರ್ ಕಾರ್ಡ್ ನಿಂದ ಹಿಡಿದು, ಡ್ರೈವಿಂಗ್ ಲೈಸೆನ್ಸ್, ಫ್ಯಾನ್ ಕಾರ್ಡ್, ನಾನು ಓದಿರುವಂತ ಸ್ಕೂಲ್ ಡೀಟೆಲ್ಸ್, ನನ್ನ ಹತ್ತಿರ ಇರುವಂತ ಕಾರ್ ಆರ್ ಸಿ ಕಾರ್ಡ್, ಬೈಕ್ ಆರ್ ಸಿ ಕಾರ್ಡ್, ಮನೆಯ ಲೀಸ್ ಅಗ್ರಿಮೆಂಟ್ ಪ್ರತಿಯೊಂದು ಕೊಟ್ಟಿದ್ದೇನೆ ಎಂದರು.
ನೋಡಿ ಬೇಕಿದ್ದರೇ ನನ್ನ ಬಳಿಯಲ್ಲಿ ಎರಡು ಬ್ಯಾಂಕ್ ಅಕೌಂಟ್ ಗಳಿದ್ದಾವೆ. ಆ ಬ್ಯಾಂಕ್ ಖಾತೆಯ ಹಣ ವರ್ಗಾವಣೆಯ ಸಂಪೂರ್ಣ ದಾಖಲೆಗಳನ್ನು ಸಂಬಂಧ ಪಟ್ಟಂತ ಪೊಲೀಸ್ ಅಧಿಕಾರಿಗಳಿಗೆ ನೀಡಿದ್ದೇನೆ. ನಾನು ಸೈಡ್ ಬ್ಯುಸಿನೆಸ್ ಆಗಿ ಯೂಟ್ಯೂಬರ್ ಆಗಿ ಆಡ್ ಪ್ರಮೋಷನ್, ಬ್ರಾಂಡ್ ಪ್ರಮೋಷನ್ ಗಳನ್ನು ಮಾಡಿದ್ದೇನೆ ಎಂದಿದ್ದಾರೆ.
ನನ್ನ ವೀಡಿಯೋ ಸುಳ್ಳು ಎನ್ನುತ್ತಿದ್ದಾರಲ್ಲ. ಹಾಗಿದ್ದರೇ 20 ವರ್ಷಗಳ ಹಿಂದೆ ಗೌರಿ ಲಂಕೇಶ್ ಮಾಡಿರುವಂತ ಈ ವರದಿ ಸುಳ್ಳಾ? ಪೊಲೀಸರ ಯುಡಿಆರ್ ರಿಪೋರ್ಟ್ ನಲ್ಲಿ ಲಾಡ್ಜ್ ನಲ್ಲಿ ಅನಾಥ ಶವಗಳು ಸಿಕ್ಕಿರುವಂತ ಮಾಹಿತಿ ಇದೆ. ಲಾಡ್ಜ್ ನಲ್ಲಿ ರೂಮ್ ಕೊಡಬೇಕಾದರೇ ಒಂದು ವಿಳಾಸದ ದಾಖಲೆ ನೀಡಬೇಕು. ಹಾಗೆ ನೀಡದಿದ್ದರೇ ರೂಂ ಕೊಡೋದಿಲ್ಲ. ಹಾಗಾದ್ರೇ ಆ ದಾಖಲೆಯಿದ್ದರೂ ಅನಾಥ ಶವ ಹೇಗೆ ಆಗುತ್ತದೆ. ನನ್ನ ವರದಿ ಸುಳ್ಳಾದರೇ, ಪೊಲೀಸರ ಯುಡಿಆರ್ ರಿಪೋರ್ಟ್ ಸುಳ್ಳ ಎಂದು ಪ್ರಶ್ನಿಸಿದ್ದಾರೆ.
ಕೋಲಾರದಲ್ಲಿ ಶಾಲೆಗೆ ಬಾರದ ವಿದ್ಯಾರ್ಥಿಯನ್ನ ಪ್ರಶ್ನಿಸಿದ ಶಿಕ್ಷಕಿಯ ಮೇಲೆ ತಂದೆಯಿಂದ ಹಲ್ಲೆ
BREAKING: ನನಗೆ ವಿದೇಶದಿಂದ ಯಾವುದೇ ಫಂಡ್ ಬಂದಿಲ್ಲ: ಯೂಟ್ಯೂಬರ್ ಸಮೀರ್ ಹೊಸ ವೀಡಿಯೋ ರಿಲೀಸ್