ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಶಾಕಿಂಗ್ ಘಟನೆ ನಡೆದಿದ್ದು, ಕರೆಂಟ್ ಶಾಕ್ನಿಂದ ಜೀವ ಕಳೆದುಕೊಂಡಿದ್ದ ಕಾರ್ಮಿಕನ ಮೃತದೇಹವನ್ನ ರಹಸ್ಯವಾಗಿ ಹೂತಿಟ್ಟು ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದ ಲೈನ್ ಮ್ಯಾನ್ ಬಂಧಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯಲ್ಲಿ ನಡೆದಿದೆ
ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ನಿವಾಸಿ ರವಿ (33) ಮೃತ ಕಾರ್ಮಿಕ. ಇನ್ನೂ ಚಂದ್ರಕುಮಾರ್ ಎಂಬ ಲೈನ್ ಮ್ಯಾನ್ ಕೃತ್ಯ ಎಸಗಿದ್ದಾನೆ. ವಿದ್ಯುತ್ ಕೆಲಸಕ್ಕೆ ಅಂತ ಕಾರ್ಮಿಕನನ್ನ ಕರೆದೊಯ್ದ ಲೈನ್‌ಮ್ಯಾನ್ ಆತ ಆಕಸ್ಮಿಕವಾಗಿ ವಿದ್ಯುತ್ ಹರಿದು ಕಂಬದಲ್ಲೇ ಮೃತಪಟ್ಟಿದ್ದಾನೆ. ನಂತರ ಆತನ ಮೃತದೇಹವನ್ನ ಅಲ್ಲೇ ಸಮೀಪದ ಕೆರೆಯಂಗಳದ ಕಾಲುವೆಯಲ್ಲಿ ರಹಸ್ಯವಾಗಿ ಹೂತು ಹಾಕಿ ಪ್ರಕರಣವನ್ನ ಮುಚ್ಚಿ ಹಾಕಲು ಯತ್ನಿಸಿದ್ದ.
ಇನ್ನೂ ರವಿ ಮನೆಯವರು ರವಿ ಕಾಣೆಯಾದ ಬಗ್ಗೆ ಗುಡಿಬಂಡೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ರು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಲೈನ್ ಮ್ಯಾನ್ ಚಂದ್ರಕುಮಾರ್ ನನ್ನ ಬಂಧಿಸಿದ್ದಾರೆ. ಇನ್ನೂ ಮೃತದೇಹ ಹೂತ ಜಾಗ ತೋರಿಸಿದ್ದು ಮೃತದೇಹ ಹೊರತೆಗೆಯಲು ಪೊಲೀಸರು ಮುಂದಾಗಿದ್ದಾರೆ.