ಕಲಬುರ್ಗಿ: ಜಿಲ್ಲೆಯ ಚಿಂಚನಸೂರಿನಲ್ಲಿ 2.3 ತೀವ್ರತೆಯಲ್ಲಿ ಭೂಕಂಪನ ಉಂಟಾಗಿದೆ. ಭೂಮಿ ಕಂಪಿಸಿದ್ದರಿಂದ ಮನೆಯಿಂದ ಓಡಿ ಬಂದಂತ ಜನರು ಕೆಲ ಕಾಲ ಬಯಲಲ್ಲೇ ಆತಂಕದಲ್ಲಿ ಕಳೆದಿದ್ದಾರೆ.
ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಚಿಂಚನಸೂರು ಗ್ರಾಮದಲ್ಲಿ ಇಂದು ಭೂಕಂಪನದ ಅನುಭವ ಉಂಟಾಗಿದೆ. ಈ ಬಗ್ಗೆ ಕೆ ಎಸ್ ಡಿ ಎಂ ಸಿ ಮಾಹಿತಿ ನೀಡಿದ್ದು, ರಿಕ್ಟರ್ ಮಾಪಕದಲ್ಲಿ 2.3 ತೀವ್ರತೆಯಲ್ಲಿ ಭೂಕಂಪನ ಉಂಟಾಗಿರುವುದಾಗಿ ತಿಳಿಸಿದೆ.
ಇಂದು ಬೆಳಗ್ಗೆ 8.30ರ ಸುಮಾರಿಗೆ ಈ ಭೂಕಂಪನ ಸಂಭವಿಸಿದೆ. ಭೂಕಂಪನದಿಂದಾಗಿ ಗ್ರಾಮದ ಜನರು ಬೆಚ್ಚಿ ಬಿದ್ದಿದ್ದಾರೆ.
ಮಾನವ – ಪ್ರಾಣಿಗಳ ಸಂಘರ್ಷದ ವೇಳೆ ಬಲಿಯಾದವರಿಗೆ 50 ಲಕ್ಷ ಪರಿಹಾರ: ಸಚಿವ ಈಶ್ವರ್ ಖಂಡ್ರೆ ಘೋಷಣೆ