ತುಮಕೂರು : ನೀರಿನ ವಿಚಾರಕ್ಕೆ ನಡೆದ ಜಗಳ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗಿದೆ. ಕೊಡುಗೆನಹಳ್ಳಿ ಹೋಬಳಿಯ ಪೊಲೇನಳ್ಳಿಯಲ್ಲಿ ಈ ಒಂದು ಘಟನೆ ನಡೆದಿದ್ದು, ತುಮಕೂರು ಜಿಲ್ಲೆಯ ಮದುವೆ ತಾಲೂಕಿನ ಪೊಲೆನಹಳ್ಳಿ ಗೂಡ್ಸ್ ವಾಹನ ಹರಿಸಿ ಆನಂದ್ ಎನ್ನುವ ವ್ಯಕ್ತಿಯನ್ನು ನಾಗೇಶ್ ಭೀಕರವಾಗಿ ಕೊಲೆ ಮಾಡಿದ್ದಾನೆ.
ವಾಹನದಿಂದ ಡಿಕ್ಕಿ ಹೊಡೆದು ಆನಂದನನ್ನು ನಾಗೇಶ ಕೊಲೆ ಮಾಡಿದ್ದಾನೆ. ಘಟನೆ ಬಳಿಕ ತಾನೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಆರೋಪಿ ನಾಗೇಶ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ಒಳಪಡಿಸಿದ್ದಾರೆ. ಕೊಡಿಕೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿನ್ನೆ ನೀರಿನ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿತ್ತು. ಆನಂದ ಮನೆಯ ಟ್ಯಾಂಕ್ ತುಂಬಿ ನೀರು ಪೋಲಾಗುತ್ತಿತ್ತು. ಈ ವೇಳೆ ಸ್ಥಳಕ್ಕೆ ಬಂದ ನಾಗೇಶ್ ತಂದೆ ರಾಮಕೃಷ್ಣ ಬಿಲ್ ಕಲೆಕ್ಟರ್ ಆಗಿದ್ದರು.
ಈ ವೇಳೆ ಅವರ ವಿರುದ್ಧ ನಿಂದನೆ ಆರೋಪ ಕೇಳಿ ಬಂದಿದೆ. ನೀರು ಪೋಲಾಗುತ್ತಿದ್ದಕ್ಕೆ ನಿಂದಿಸಿದ್ದಾರೆ ಎಂದು ಗಲಾಟೆ ಮಾಡಿದ್ದಾರೆ. ಆನಂದ ಕುಟುಂಬ ಮತ್ತು ನಾಗೇಶ ಕುಟುಂಬದ ಮಧ್ಯ ಗಲಾಟೆ ಆಗಿದೆ. ಈ ವೇಳೆ ಆನಂದ್ ನಾಗೇಶ್ ತಾಯಿಯ ಮೇಲೆ ಹಲ್ಲೆ ಮಾಡಿದ್ದಾನೆ ತಾಯಿಯ ಮೇಲೆ ಹಲ್ಲಿಯ ವಿಚಾರ ತಿಳಿದು ನಾಗೇಶ್ ಆಕ್ರೋಶಗೊಂಡು ಹೊರಗಡೆ ಕೆಲಸಕ್ಕೆ ಹೋಗಿದ್ದ ನಾಗೇಶ್ ಗ್ರಾಮಕ್ಕೆ ಬಂದಿದ್ದಾನೆ. ಮನೆಗೆ ಬರುತ್ತಿದ್ದ ನಾಗೇಶ್ ರಸ್ತೆ ಬದಿ ಬಳಿ ನಿಂತಿದ್ದ ಆನಂದ್ ನಿಗೆ ಡಿಕ್ಕಿ ಹೊಡೆದಿದ್ದಾನೆ. ಆನಂದ ಸ್ಥಳದಲ್ಲಿ ಸಾವನ್ನಪ್ಪಿದ್ದು ಘಟನೆಯ ಬಳಿಕ ನಾಗೇಶ್ ಠಾಣೆಗೆ ಹೋಗಿ ಶರಣಾಗಿದ್ದಾನೆ.