ಮಂಡ್ಯ : ಮದ್ದೂರು ಗಣೇಶ ಮೆರವಣಿಗೆ ವೇಳೆ ಕಲ್ಲು ಎಸೆತ ಘಟನೆಗೆ ಸಂಬಂಧಿಸಿದಂತೆ ಮೂರು ದಿನದ ಬಳಿಕ ಮದ್ದೂರು ಪಟ್ಟಣ ಸಹಜ ಸ್ಥಿತಿಯತ್ತ ಮರಳಿದೆ. ಇಂದು ಎಂದಿನಂತೆ ವ್ಯಾಪರ ವಹಿವಾಟು ಆರಂಭವಾಗಿದೆ.
ಅಂಗಡಿ ಮುಂಗಟ್ಟು ತೆರೆದಿರಿವ ವರ್ತಕರು. ಮೂರು ದಿನ ಬಂದ್ ಸಂಪೂರ್ಣ ಮುಚ್ಚಿದ್ದ ಅಂಗಡಿ ಮುಂಗಟ್ಟುಗಳು. ಇಂದು ಮತ್ತೆ ಓಪನ್ ಆಗಿವೆ. ವ್ಯಾಪಾರಸ್ಥರು ವ್ಯಾಪರ ವಹಿವಾಟು ನಿಲ್ಲಿಸಿ ಹೋರಾಟಕ್ಕೆ ಬೆಂಬಲ ನೀಡಿದ್ದರು. ಇಂದು ಬೆಳಿಗ್ಗೆಯಿಂದಲೇ ಅಂಗಡಿ ತೆರೆದು ವ್ಯಾಪಾರ ಶುರುವಾಗಿದೆ. ಭಾನುವಾರ ರಾತ್ರಿ ಗಣೇಶ ಮೆರವಣಿಗೆ ಮೇಲೆ ಕಲ್ಲು ಎಸೆತವಾಗಿತ್ತು. ರಾಮ್ ರಹೀಮ್ ನಗರದ ಮಸೀದಿ ಮುಂಭಾಗ ದುಷ್ಕೃತ್ಯ ನಡೆದಿತ್ತು.
ಘಟನೆ ಖಂಡಿಸಿ ಸೋಮವಾರ ಹಿಂದುಗಳಿಂದ ಬೃಹತ್ ಪ್ರತಿಭಟನೆ. ನಡೆಸಲಾಯಿತು. ಮಂಗಳವಾರ ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಲಾಗಿತ್ತು. ಬುಧವಾರ ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆ ನಡೆಯಿತು. ಈ ವೇಳೆ ವರ್ತಕರು ಮೂರು ದಿನವೂ ವ್ಯಾಪಾರ ವಹಿವಾಟು ನಿಲ್ಲಿಸಿದ್ದರು. ಮದ್ದೂರು ಪಟ್ಟಣ ಸಹಜ ಸ್ಥಿತಿಗೆ ಮರಳುತ್ತಿದ್ದರೂ ಸಹ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ಭದ್ರತೆ ಮುಂದುವರೆಸಿದೆ.
ಕಲ್ಲು ಎಸೆತವಾಗಿದ್ದ ಮಸೀದಿ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರ ನಿಯೋಜನೆ. ಮಾಡಲಾಗಿದೆ. ಮಸೀದಿ, ದರ್ಗಾ ಬಳಿ ಮುಂದುವರೆದ ಪೊಲೀಸರ ಭದ್ರತೆ. ಸಾಮೂಹಿಕ ಗಣೇಶ ವಿಸರ್ಜನೆಯಿಂದ ಕೊಂಚ ಆತಂಕ ದೂರವಾಗಿದೆ. ಇನ್ನು ಪಟ್ಟಣದಲ್ಲಿ ಹಲವು ಗಣಪತಿಗಳು ವಿಸರ್ಜನೆ ಬಾಕಿ ಇವೆ. ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣದಲ್ಲಿ ಬೀಡು ಬಿಟ್ಟಿರುವ ಪೊಲೀಸ್ ತುಕಡಿಗಳು.
ಮೇಲ್ನೋಟಕ್ಕೆ ಸಹಜ ಸ್ಥಿತಿಯಲ್ಲಿದ್ರು, ಮದ್ದೂರು ಬೂದಿ ಮುಚ್ಚಿದ ಕೆಂಡದಂತಿದೆ.