ಚಿಕ್ಕಮಗಳೂರು : ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣಪತಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದರಿಂದ ನಿನ್ನೆ ಸಿಟಿ ರವಿ ಪ್ರಚೋದನಕಾರಿ ಭಾಷಣ ಮಾಡಿದ್ದರು. ಈ ವಿಚಾರವಾಗಿ ಚಿಕ್ಕಮಗಳೂರಿನಲ್ಲಿ ಎಂಎಲ್ಸಿ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ 14ನೇ ವಯಸ್ಸಿನಲ್ಲಿ ಮೊದಲ ಬಾರಿ ಆಗಿತ್ತು. ನಮ್ಮ ಸಹನೆಗೂ ಒಂದು ಮಿತಿ ಇದೆ. ನೀವು ನನ್ನ ಮೇಲೆ 100 ‘FIR’ ದಾಖಲಿಸಿದರು ಎದುರಿಸುತ್ತೇನೆ, ಯಾವುದಕ್ಕೂ ಹೆದರಲ್ಲ ಎಂದು ಕಿಡಿ ಕಾರಿದ್ದಾರೆ.
ಚಿಕ್ಕಮಗಳೂರಲ್ಲಿ ಮಾತನಾಡಿದ ಅವರು, ಗಣಪತಿ ಮೆರವಣಿಗೆ ಮೇಲೆ ಕಲ್ಲು ಹೊಡೆದರೆ ಸುಮ್ಮನಿರಬೇಕಾ? ಪೆಟ್ರೋಲ್ ಬಾಂಬ್ ಹಾಕಿದ್ರೆ ನಾವು ಸುಮ್ಮನಿರಬೇಕಾ? ಪಾಕಿಸ್ತಾನ ಪರ ಘೋಷಣೆ ಕೂಗಿದರೆ ಸಹಿಸಿಕೊರುವ ಕಾಲ ಅಲ್ಲ. ತಾಳ್ಮೆ ಕಟ್ಟೆ ಹೊಡೆದಿರುವುದು ತೋರಿಸಲೆಂದೇ ಜನಾಕ್ರೋಶ.
ಮಂಡ್ಯ ಜಿಲ್ಲೆ, ಮದ್ದೂರಿನಲ್ಲಿ ನಮ್ಮ ಸಂಘಟನೆ ಬಲವಾಗಿಲ್ಲ. ಆದರೂ ಹಿಂದು ಸಮುದಾಯದಿಂದ ಆಕ್ರೋಶ ವ್ಯಕ್ತವಾಗಿದೆ. ನೀವು ಏನು ಮಾಡಿದರೂ ಸಹಿಸಿಕೊಳ್ಳುತ್ತೇವೆ ಎಂಬ ಕಾಲ ಮುಗಿದಿದೆ. ನೀವು 100 ಹಾಕಿದರೂ ನಾನು ಎದುರಿಸುತ್ತೇನೆ. ನನಗೆ ಯಾವುದೇ ಹೆದರಿಕೆ ಇಲ್ಲ ಹಿಂದುತ್ವದ ಸಲುವಾಗಿಯೇ ನಾನು ರಾಜಕಾರಣಕ್ಕೆ ಬಂದಿದ್ದೇನೆ ಎಂದು ಸಿಟಿ ರವಿ ತಿಳಿಸಿದರು.