ಬಳ್ಳಾರಿ : ಬಳ್ಳಾರಿಯಲ್ಲಿ ಜೆಸ್ಕಾಂ ನಿರ್ಲಕ್ಷಕ್ಕೆ ಬಾಲಕನೊಬ್ಬ ಕೈ ಕಳೆದುಕೊಂಡಿರುವ ಘಟನೆ ವರದಿಯಾಗಿದೆ. 11 ಕೆ.ವಿ ವಿದ್ಯುತ್ ವೈರ್ ತಗುಲಿ ಕೈ ಕಟ್ಟಾಗಿದೆ. ಮನೆ ಮೇಲೆ ಆಟವಾಡುವಾಗ ಕೈಯಲ್ಲಿದ್ದ ವೈರಿಗೆ ಟಚ್ ಆಗಿದೆ, ಬಳ್ಳಾರಿಯ ವಿರಾಟ್ ನಗರದಲ್ಲಿ ಒಂದು ಘಟನೆ ಸಂಭವಿಸಿದೆ.
ಬಾಲಕನ ಕೈಯಲ್ಲಿದ್ದ ವೈರ್ ಗೆ ತಗುಲಿದ ವಿದ್ಯುತ್ ತಂತಿ ಶಾಕ್ ಹೊಡೆದ ತೀವ್ರತೆಗೆ ಬಾಲಕನ ಕೈ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ 11 ಕೆ.ವಿ ವೈರ್ ಗೆ ಪ್ಲಾಸ್ಟಿಕ್ ಹಾಕದೆ ನಿರ್ಲಕ್ಷ ತೊರಿದ್ದು ಅಪಾರ್ಟ್ಮೆಂಟ್ ಮಾಲಿಕ ಮತ್ತು ಜೆಸ್ಕಾಂ ಇಂಜಿನಿಯರ್ ಮೇಲೆ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.aa