ಬೆಂಗಳೂರು : ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಎಸ್. ನಾರಾಯಣ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿ ಬಂದಿದ್ದು ಎಸ್ ನಾರಾಯಣ ಅವರ ಸೊಸೆ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಮಾಡಿ ಬೆಂಗಳೂರಿನ ಜ್ಞಾನ ಭಾರತಿ ಠಾಣೆಗೆ ದೂರು ನೀಡಿದ್ದಾರೆ ಈ ಹಿನ್ನೆಲೆಯಲ್ಲಿ ಎಸ್ ನಾರಾಯಣ ಹಾಗೂ ಅವರ ಪತ್ನಿ, ಪುತ್ರನ ವಿರುದ್ಧ FIR ಸಹ ದಾಖಲಾಗಿದೆ. ಈ ವಿಚಾರವಾಗಿ ಎಸ್ ನಾರಾಯಣ ನನ್ನ ಮನೆಯ ಹೆಣ್ಣು ಮಕ್ಕಳು ದುಡಿಯುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್ ನಾರಾಯಣ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಅವರು ದುಡಿದು ನನ್ನ ಸಾಕಬೇಕಾ? ನನ್ನ ಬಳಿ ಎಂಟು ಜನ ಕೆಲಸದವರು ಇದ್ದಾರೆ ನಮ್ಮ ಸೊಸೆ ಪವಿತ್ರ ಮನೆ ಬಿಟ್ಟು ಹೋಗಿ 14 ತಿಂಗಳಾಯಿತು ವರದಕ್ಷಿಣೆ ಪಿಡುಗು ತೊಲಗಿಸಬೇಕು ಅಂತ ಸಿನಿಮಾ ಮಾಡಿದವನು ನಾನು ಎಂದರು.
ಪವನ್ ಪವಿತ್ರ ಪ್ರೀತಿಸಿ ಮದುವೆಯಾಗಿದ್ದರು ನಾವು ಸಹ ಅದಕ್ಕೆ ವಿರೋಧ ಮಾಡಲಿಲ್ಲ ಹಿರಿಯರ ಅನುಭವದ ಮಾತುಗಳನ್ನು ಕೇಳಿಸಿಕೊಳ್ಳಲು ಅವರು ಸಿದ್ಧರಿರಲಿಲ್ಲ ಅವರ ಮನೆಯ ಹಿರಿಯರನ್ನು ಕರೆದು ನಾನು ಮಾತನಾಡಿದ್ದೆ ಆದರೆ ಮಾತುಕತೆ ಫಲಕಾರಿಯಾಗಲಿಲ್ಲ ನನ್ನ ಕುಟುಂಬದ ಹೆಣ್ಣು ಮಕ್ಕಳು ದುಡಿಯುವ ಅವಶ್ಯಕತೆ ಇರಲಿಲ್ಲ ಎಂದು ನಿರ್ದೇಶಿಕ ಎಷ್ಟು ನಾರಾಯಣ ತಿಳಿಸಿದ್ದಾರೆ.