ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇತ್ತೀಚಿಗೆ ನ್ಯಾಯಾಲಯವು ನಟ ದರ್ಶನ್ ಅವರನ್ನು ಬಳ್ಳಾರಿ ಜಿಲ್ಲೆಗೆ ಸ್ಥಳಾಂತರಿಸಲು ಸಕಾರಣಗಳಿಲ್ಲ ಎಂದು ಹೇಳಿ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಅರ್ಜಿಯನ್ನು ತಿರಸ್ಕೃತಗೊಳಿಸಿತ್ತು. ಇನ್ನೊಂದು ಅರ್ಜಿಯಲ್ಲಿ ದರ್ಶನ್ ಪರ ವಕೀಲರು ಹಾಸಿಗೆ ದಿಂಬು ನೀಡಬೇಕು ಎಂದು ಮನವಿ ಸಲ್ಲಿಸಿದ್ದು, ಇದೀಗ ಜಲ್ಲಿ ಸಿಬ್ಬಂದಿಗಳು ದರ್ಶನಗೆ ಹಾಸಿಗೆ ದಿಂಬು ನೀಡಿದ್ದಾರೆ.
ಹೌದು ಕೊಲೆ ಆರೋಪಿ ದರ್ಶನ್ ಜೈಲಲ್ಲಿ ಕೊಂಚ ನಿರಾಳ ಆಗಿದ್ದಾರೆ. ಜೈಲಿನ ಸಿಬ್ಬಂದಿಗಳು ಹೆಚ್ಚುವರಿ ಹಾಸಿಗೆ ಮತ್ತು ದಿಂಬು ನೀಡಿದ್ದು, ನಿನ್ನೆ ಹಾಸಿಗೆ ಮೇಲೆ ದರ್ಶನ್ ನೆಮ್ಮದಿಯಾಗಿ ನಿದ್ರೆ ಮಾಡಿದ್ದಾರೆ. ಜೈಲಿನ ಬ್ಯಾರಕ್ ಮುಂಭಾಗ ದರ್ಶನ್ ವಾಕ್ ಸಹ ಮಾಡಿದ್ದಾರೆ. ಕೈಯಲ್ಲಾಗಿದ್ದ ಫಂಗಸ್ಗೆ ಜೈಲು ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಮಾನಸಿಕವಾಗಿ ಹೋಗಿರುವ ದರ್ಶನಿಗೆ ಜೈಲಿನ ಮನೋವೈದ್ಯರು ಕೌನ್ಸಿಲಿಂಗ್ ನಡೆಸಿದ್ದಾರೆ.