ಚಿಕ್ಕೋಡಿ: 14 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದಂತ ಅಪರಾಧಿಗೆ ಕೋರ್ಟ್ 30 ವರ್ಷ ಜೈಲು ಶಿಕ್ಷ, 10,000 ದಂಡವನ್ನು ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಚಿಕ್ಕೋಡಿಯ ನಿಪ್ಪಾಣಿ ತಾಲ್ಲೂಕಿನಲ್ಲಿ ಆಕಾಶ್ ಆಲಿಯಾಸ್ ಅಕ್ಷಯ್ ಮಹಾದೇವ್ ಸಾಳುಂಕೆ ಎಂಬಾತ 14 ವರ್ಷದ ಬಾಲಕಿಯ ಮೇಲೆ ಆಗಸ್ಟ್.18, 2019ರಂದು ಅತ್ಯಾಚಾರ ಎಸಗಿದ್ದನು. ಈ ಸಂಬಂಧ ನಿಪ್ಪಾಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣ ಕುರಿತಂತೆ ನ್ಯಾಯಾಲಯಕ್ಕೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದಂತ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದಂತ ಸಿಎಂ ಪುಷ್ಪಲತಾ ಅವರು, ಸೆಪ್ಟೆಂಬರ್.4, 2025ರಂದು ಆಕಾಶ್ ಅಪರಾಧಿ ಎಂಬುದಾಗಿ ತೀರ್ಪು ನೀಡಿದ್ದರು. ಇದೀಗ ಅಪರಾಧಿ ವಿರುದ್ಧ ಐಪಿಸಿ ಸೆಕ್ಷನ್ 376ರಡಿ ಪೋಕ್ಸೋ ಕೇಸ್ ಅಡಿಯಲ್ಲಿ 30 ವರ್ಷ ಕಠಿಣ ಜೈಲು ಶಿಕ್ಷೆ, 10,000 ದಂಡ ವಿಧಿಸಿ ಆದೇಶಿಸಿದ್ದಾರೆ. ಅಲ್ಲದೇ ಸಂತ್ರಸ್ತೆಗೆ 4 ಲಕ್ಷ ರೂಪಾಯಿ ಪರಿಹಾರ ನೀಡುವಂತೆಯೂ ಆದೇಶಿಸಿದ್ದಾರೆ.
BREAKING: ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ನೂತನ ನಿರ್ದೇಶಕರಾಗಿ ಡಾ.ದಿನೇಶ್ ನೇಮಕ