ಹಾವೇರಿ : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ವರದಿಯಾಗಿದ್ದು, ಪ್ರಿಯಕರೊಂದಿಗೆ ಸೇರಿ ಕ್ರೂರಿ ತಾಯಿಯೊಬ್ಬಳು ತನ್ನ ಹೆತ್ತ ಮಗುವನ್ನೇ ಕೊಂದಿರುವ ಘಟನೆ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಗುಡ್ಡದ ಅಣ್ವಿರಿ ಗ್ರಾಮದಲ್ಲಿ ನಡೆದಿದೆ. ಪ್ರಿಯಾಂಕ (4) ಎನ್ನುವ ಮಗಳನ್ನು ಉಸಿರುಗಟ್ಟಿಸಿ ಗಂಗಮ್ಮ ಮತ್ತು ಪ್ರಿಯಕರ ಅಣ್ಣಪ್ಪ ಕೊಲೆ ಮಾಡಿದ್ದಾರೆ.
ಆಗಸ್ಟ್ 5 ರಂದು ಪ್ರಿಯಾಂಕ ಕೊಲೆಗೈದು ಶವ ಸುಟ್ಟು ಹಾಕಲು ಯತ್ನಿಸಲಾಗಿದೆ. ತುಂಗಾ ಮೇಲ್ದಂಡೆ ಕಾಲುವೆ ಬಳಿ ಶವ ಸುಟ್ಟು ಹಾಕಲು ಪ್ರಯತ್ನಿಸಲಾಗಿದೆ. ಬಾಲಕಿಯ ದೇಹ ಅರ್ಧ ಸುಟ್ಟು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪತಿ ಬಿಟ್ಟು ಪ್ರಿಯಕರ ಅಣ್ಣಪ್ಪ ಮಡಿವಾಳ ಜೊತೆಗೆ ಗಂಗಮ್ಮ ವಾಸವಿದ್ದಳು. ಮಗಳನ್ನು ಕಳಿಸಿಕೊಡು ಎಂದು ಕೇಳಲು ಹೋದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ರಾಣೆಬೆನ್ನೂರು ಪೊಲೀಸರು ಗಂಗಮ್ಮ ಮತ್ತು ಅಣ್ಣಪ್ಪನನ್ನು ಅರೆಸ್ಟ್ ಮಾಡಿದ್ದಾರೆ. ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.