ಬೆಂಗಳೂರು : ಬೆಳಗಾವಿಯಲ್ಲಿ ನಿವೇಶನಕ್ಕಾಗಿ ಮಹಿಳೆಯ ಬರ್ಬರ ಕೊಲೆಯಾಗಿದ್ದು, ನಿವೇಶನಕ್ಕಾಗಿ ರೌಡಿ ಶೀಟರ್ ತನ್ನ ತಮ್ಮನ ಹೆಂಡತಿಗೆ 20ಕ್ಕೂ ಹೆಚ್ಚು ಬಾರಿ ಚಾಕು ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಗರದ ಟಿಳಕವಾಡಿಯಲ್ಲಿ ನಡೆದಿದೆ.
ಬೆಳಗಾವಿ ನಗರದ ಟಿಳಕವಾಡಿಯ ಗೀತಾ ಗವಳಿ (45) ಎನ್ನುವ ಮಹಿಳೆಯನ್ನು ಗಣೇಶ ಎನ್ನುವ ವ್ಯಕ್ತಿ 20ಕ್ಕೂ ಹೆಚ್ಚು ಬಾರಿ ಚಾಕು ಇರಿದು ಕೊಲೆ ಮಾಡಿದ್ದಾನೆ. ಹಲವು ವರ್ಷಗಳ ಹಿಂದೆ ಗಣೇಶ್ ತಮ್ಮ ಅಂದರೆ ಕೊಲೆಯಾದ ಗೀತಾಳ ಪತಿ ಮೃತಪಟ್ಟಿದ್ದ. ಪತಿಗೆ ಸೇರಿದ 40×12 ನಿವೇಶನಕ್ಕಾಗಿ ರಂಜಿತ್ ಜೊತೆಗೆ ಜಗಳ ನಡೆದಿತ್ತು. ಇಂದು ಬೆಳಿಗ್ಗೆ ಮಾತಿನ ಚಕಮಕಿ ನಡೆದು ಗಣೇಶ್ ಗೀತಾಳಿಗೆ 20ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.ಆರೋಪಿ ಗಣೇಶ್ ಟಿಳಕವಾಡಿ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಆಗಿದ್ದು, ಸದ್ಯ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.