ಚಾಮರಾಜನಗರ : ಸಾಲ ನೀಡುವುದಾಗಿ ಆನ್ಲೈನ್ ನಲ್ಲಿ 2.38 ಲಕ್ಷ ಕಳೆದುಕೊಂಡು ಮನನೊಂದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಚಾಮರಾಜನಗರ ಕೊಳ್ಳೇಗಾಲ ತಾಲೂಕಿನ ಕಾಮಗೆರೆ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಸಾಲ ನೀಡುವುದಾಗಿ ಆನ್ಲೈನ್ ಆಪ್ ನಲ್ಲಿ 2.38 ಲಕ್ಷ ವಂಚನೆಗೆ ಒಳಗಾಗಿದ್ದಾನೆ.
ಧಣಿ ಕ್ಯಾಪಿಟಲ್ಸ್ ಸಂಸ್ಥೆಯಿಂದ 15 ಲಕ್ಷ ಸಾಲ ನೀಡುವುದಾಗಿ ವಂಚನೆ ಎಸಗಲಾಗಿದ್ದು, 2.38 ಲಕ್ಷ ಹಣವನ್ನು ಆನ್ಲೈನ್ ಪೇಮೆಂಟ್ ಮಾಡಿದ್ದ ರಾಜಪ್ಪ, ಹಣ ವರ್ಗಾವಣೆ ಬಳಿಕ ವಂಚನೆ ಎಂದು ತಿಳಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.ನನ್ನ ಸಾವಿಗೆ ಧಣಿ ಕ್ಯಾಪಿಟಲ್ಸ್ ನ ಅನಂತ್ ಲೂಹ ಚಿಕ್ಕರಂಜನ್ ಕಾರಣ ಎಂದು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆ ಕುರಿತು ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ