ಬೆಂಗಳೂರು : ಬೆಂಗಳೂರಲ್ಲಿ ಪ್ರೇಮ ವೈಫಲ್ಯ ಹಿನ್ನೆಲೆ ಇವತ್ತಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಾಟನೆ ರಾಜಾಜಿನಗರದ ಗಾಯತ್ರಿ ನಗರದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಲತಾ (25) ಎಂದು ತಿಳಿದುಬಂದಿದೆ. ಕಳೆದ 5 ವರ್ಷಗಳಿಂದ ರಂಜಿತ್ ಹಾಗು ಲತಾ ಪರಸ್ಪರ ಪ್ರೀತಿಸುತ್ತಿದ್ದರು. ಎರಡು ಕುಟುಂಬ ಮದವರು ಸಹ ಮದುವೆಗೆ ಒಪ್ಪಿದ್ದರು.
ಮೃತ ಲತಾ ಖಾಸಗಿ ಕ್ಲಿನಿಕ್ ನಲ್ಲಿ ಕೆಲಸ ಮಾಡುತ್ತಿದ್ದಳು. ಮದುವೆ ವಿಚಾರವನ್ನ ಪದೇ ಪದೇ ರಂಜಿತ್ ಮುಂದೂಡುತ್ತಿದ್ದ. ಇದೆ ವಿಚಾರಕ್ಕೆ ಇಬ್ಬರ ಮಧ್ಯ ಹಲವು ಬಾರಿ ಗಲಾಟೆ ಆಗಿತ್ತು. ಮೃತ ಲತಾ ಹಾಗು ರಂಜಿತ್ ಇಬ್ಬರು ಮಂಡ್ಯ ಮೂಲದವರು ಎಂದು ತಿಳಿದುಬಂದಿದೆ. ನಿನ್ನೆ ಕೂಡ ಇದೆ ವಿಚಾರವಾಗಿ ಇಬ್ಬರ ಮಧ್ಯ ಗಲಾಟೆ ಆಗಿತ್ತು. ಇಂದು ಬೆಳಿಗ್ಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಲತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನಾ ಸ್ಥಳಕ್ಕೆ ಸುಬ್ರಮಣ್ಯ ಠಾಣೆ ಪೊಲೀಸರು ಭೇಟಿ ಬೀದಿ ಪರಿಶೀಲನೆ ನಡೆಸುತ್ತಿದ್ದಾರೆ.a