ಬೆಳಗಾವಿ : ಪ್ರೀತಿ ವಿಚಾರಕ್ಕೆ ಬುದ್ಧಿವಾದ ಹೇಳಿದಕ್ಕೆ ಚಾಕು ಇರಿದು ಕೊಲೆಗೆ ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ಬಸ್ ನಿಲ್ದಾಣದ ಬಳಿ ಈ ಒಂದು ಘಟನೆ ನಡೆದಿದೆ. ಕಣ್ಣಿಗೆ ಕಾರದಪುಡಿ ಎರಚಿ ಚಾಕುವಿನಿಂದ ಇರಿದು ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ.ಮಡಿವಾಳಪ್ಪ ಬೊಗಟಿಗೆ ದರ್ಶನ್ ಮೇಟಿ (20) ಎಂಬ ಯುವಕ ಚಾಕುವಿನಿಂದ ಇರಿದಿದ್ದಾನೆ.
ಗಾಯಗೊಂಡ ಮಡಿವಾಳಪ್ಪಗೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹುಡುಗಿ ವಿಚಾರಕ್ಕೆ ಕರೆದು ಮಡಿವಾಳಪ್ಪ ಬುದ್ಧಿವಾದ ಹೇಳಿದ್ದ. ಯುವತಿ ಒಬ್ಬಳ ಜೊತೆಗೆ ದರ್ಶನ್ ದೇವಸ್ಥಾನಕ್ಕೆ ಹೋಗಿದ್ದ ಯುವತಿ ಕುಟುಂಬಸ್ಥರ ಸಮುಖದಲ್ಲಿ ಮಡಿವಾಳಪ್ಪ ಬುದ್ಧಿವಾದ ಹೇಳಿದ್ದ. ಇದರಿಂದ ಕುಪಿತಗೊಂಡು ದರ್ಶನ್ ಕಾರದಪುಡಿ ಎರಚಿ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.