ಬೀದರ್ : ಔರಾದ್ ಕ್ಷೇತ್ರದ ಮಾಜಿ ಶಾಸಕ ಗುಂಡಪ್ಪ ವಕೀಲಗೆ ಸೈಬರ್ ವಂಚಕರು ಲಕ್ಷಾಂತರ ರೂಪಾಯಿ ವಂಚನೆ ಎಸಗಿದ್ದಾರೆ. ಸಿಬಿಐ, ಇಡಿ ಮತ್ತು ಜಡ್ಜ್ ಹೆಸರಿನಲ್ಲಿ ವಂಚಕರು ವಿಡಿಯೋ ಕಾಲ್ ಮಾಡಿದ್ದಾರೆ. ಮಾಜಿ ಶಾಸಕರಿಂದ ಹಂತ ಹಂತವಾಗಿ 30 ಲಕ್ಷ ಪಡೆದು ವಂಚನೆ ಎಸಗಿದ್ದಾರೆ. ಈ ಕುರಿತು ಬೆಂಗಳೂರು ಸಿಸಿಬಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊದಲು ಒಬ್ಬ ಖದಿಮ cbi ಅಧಿಕಾರಿ ಎಂದು ಕರೆ ಮಾಡಿದ್ದಾನೆ. ನೀವು ನರೇಶ ಗೋವಿಲ್ ಅಕ್ರಮ ಹಣ ವರ್ಗಾವಣೆ ಕೇಸ್ನಲ್ಲಿ ಭಾಗಿಯಾಗಿದ್ದಾರೆ ಎಂದು ಕರೆ ಮಾಡಿದ್ದಾನೆ ಆಗಸ್ಟ್ 13ರಂದು ಸಿಬಿಐ ಡಿಸಿಪಿ ಅಂತ ಮಾಡಿ ಶಾಸಕರಿಗೆ ಮತ್ತೊಬ್ಬ ಕರೆ ಮಾಡಿದ್ದಾನೆ. ನೀವು ಡಿಜಿಟಲ್ ಅರೆಸ್ಟ್ ಆಗಿದ್ದೀರಿ ಕಾಲ್ ಕಟ್ ಮಾಡಬೇಡಿ ಅಂತ ಹೇಳಿದ್ದಾನೆ. ಬಳಿಕ ಆನ್ಲೈನ್ ಮೂಲಕ ಫೇಕ್ ಜಡ್ಜ್ ಮುಂದೆ ಹಾಜರುಪಡಿಸಿದ್ದರು.
ಕೋರ್ಟ್ ಹಾಲ್ ಥರ ದೃಶ್ಯ ಕ್ರಿಯೇಟ್ ಮಾಡಿ ನಂಬಿಕೆ ಹುಟ್ಟಿಸಿದ್ದಾರೆ. ನಿಮ್ಮದು ತಪ್ಪಿಲ್ಲ ಎಂದು ಮುಚ್ಚಳಿಕೆ ಬರೆದು ಕೊಡಿ ಎಂದು ಹೇಳಿದ್ದಾರೆ ಮೊದಲು 10 ಲಕ್ಷ ರೂಪಾಯಿ ಹಣ ವರ್ಗಾವಣೆ ಮಾಡಿದ್ದಾರೆ. ಬಳಿಕ ಪ್ರಾಪರ್ಟಿ ತನಿಖೆ ಮಾಡಬೇಕು ಎಂದು 20 ಲಕ್ಷ ಡೆಪಾಸಿಟ್ ಮಾಡಿದ್ದಾರೆ ಹೀಗೆ ಖದೀಮರ ಮಾತು ನಂಬಿ ಹಂತ ಹಂತವಾಗಿ ಗುಂಡಪ್ಪ ಪಾಟೀಲ್ ಹಣ ವರ್ಗಾವಣೆ ಮಾಡಿದ್ದಾರೆ. ಒಟ್ಟು 30 ಲಕ್ಷ 99 ಸಾವಿರ ಹಣ ವರ್ಗಾವಣೆ ಮಾಡಿದ್ದಾರೆ. ತನಿಖೆ ಬಳಿಕ ಹಣ ವಾಪಸ್ ಕೊಡುತ್ತೇವೆ ಅಂತ ವಂಚಕರು ಹೇಳಿದ್ದರು. ಹಣ ಮರಳಿ ಬಾರದಿದ್ದಾಗ ಸಿಸಿಬಿ ಮತ್ತು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಮಾಡಿ ಶಾಸಕ ಗುಂಡಪ್ಪ ದೂರಿನ ಮೇರೆಗೆ fir ದಾಖಲಾಗಿದೆ.