ಹಾಸನ : ಕೋಡಿ ಮಠದ ಶ್ರೀಗಳು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಬಗ್ಗೆ ಭವಿಷ್ಯ ನುಡಿದಿದ್ದು, ನಿನಗಾಗಿ ಪಶ್ಚಿಮದಲ್ಲಿ ಸೂರ್ಯ ಮೂಡುತ್ತಾನಾ? ಶಕ್ತಿ ಇದ್ದರೆ ಗೆಲ್ಲು, ಇಲ್ಲದಿದ್ದರೆ ಒದಿಸಿಕೋ ಎನ್ನುವ ಮಾತುಗಳನ್ನಾಡಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು, ನಿನಗಾಗಿ ಪಡುವಣದಲ್ಲಿ ರವಿ ಮೂಡುವನೇ, ಶಕ್ತಿ ಇದ್ದರೆ ಗೆಲ್ಲು, ಇಲ್ಲದಿದ್ದರೆ ಒದಿಸಿಕೋ. ದ್ವೇಷ, ಅಸೂಯೆ, ಮತ್ಸರ ಜಾಗತಿಕವಾಗಿ ತಾಂಡವಾಡುತ್ತದೆ. ಬೆಳಕು ಬಂದ ಮೇಲೆ ಕತ್ತಲು ಹೋಗುತ್ತದೆ ಇದು ವಿಧಿ ನಿಯಮ. ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಒಳ್ಳೊಳ್ಳೆ ಗುಡಿಗಳ ಪೂಜೆಗಳು ನಿಲ್ಲುತ್ತಾ ಬರುತ್ತವೆ ಎಂದು ಕಾಲಜ್ಞಾನದಲ್ಲಿ ಹೇಳಲಾಗಿದೆ. ಎಲ್ಲಿ ನಿಧಿಯಿರುತ್ತೋ ಅಲ್ಲಿ ವಿಧಿಯಾಟವೂ ಜೋರಾಗಿ ಇರುತ್ತದೆ ಪ್ರಚಾರ ವಿಚಾರ ಸಮಾಚಾರ ಅಪಪ್ರಚಾರ ಹೀಗೆ ಬರಬೇಕಾಗಿತ್ತು. ಆದರೆ, ಅಪಪ್ರಚಾರದಿಂದಾಗಿ ಮಾಡಿದವನು ನಾಶವಾಗುತ್ತಾನೆ ಎಂದು ಶ್ರೀಗಳು ಹೇಳಿದ್ದಾರೆ.
ರಾಮಾಯಣದಲ್ಲೂ ಸೀತೆ ಅಗ್ನಿಪರೀಕ್ಷೆಗೆ ಒಳಗಾಗಿದ್ದಳು, ಅದೇ ರೀತಿ ಧರ್ಮಸ್ಥಳದಲ್ಲೂ ಸತ್ಯಾಸತ್ಯತೆ ಹೊರಬರುತ್ತದೆ. ಸತ್ಯ ಹೊರಗೆ ಬರುವ ತನಕ ಕಾಯಬೇಕಿದೆ, ಅದು ಈಗ ಒಂದೊಂದಾಗಿ ಹೊರಗೆ ಬರುತ್ತದೆ. ಅಪಪ್ರಚಾರ ಕಡೆಗೆ ಬರಬೇಕಾಗಿತ್ತು ಅದು ಇಲ್ಲಿ ಮೊದಲು ಬಂದಿದೆ ಎಂದಿದ್ದಾರೆ.