ಮಂಡ್ಯ : ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ್ ವಿಸರ್ಜನೆ ವೇಳೆ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಸೀದಿಯಲ್ಲಿ ಕಲ್ಲುಗಳನ್ನು ಸಂಗ್ರಹಿಸಿ ಇಟ್ಟುಕೊಂಡು ಹೊಡೆದಿದ್ದಾರೆ. ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಿದವರು ಶಾಂತಿ ಪ್ರಿಯರ? ಎಂದು ಪ್ರತಾಪ್ ಸಿಂಹ ಕಿಡಿ ಕಾರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತಾಲಿಬಾನ್ ಆಡಳಿತ ನಡೆಸುತ್ತಿದೆ ನಾಗಮಂಗಲ ಆಯ್ತು ಇದೀಗ ಮದ್ದೂರಿಗೆ ಇಂತಹ ಪರಿಸ್ಥಿತಿ ಬಂದಿದೆ ಇಲ್ಲಿ ಹುಟ್ಟಿ ಬೆಳೆದು ಗಡಿಯಾಚಿಗೆ ನಿಷ್ಠೆ ಇಟ್ಟುಕೊಂಡವರಿಂದ ಕೃತ್ಯ ಎಸೆಯಲಾಗಿದೆ ಉತ್ತರ ಪ್ರದೇಶದ ಪೊಲೀಸರು ಗಣೇಶ ಮೆರವಣಿಗೆಗೆ ಬಂದು ಡ್ಯಾನ್ಸ್ ಮಾಡುತ್ತಾರೆ. ತಾಲಿಬಾನ್ ಮನಸ್ಥಿತಿಯ ಕಾಂಗ್ರೆಸ್ ಸರ್ಕಾರದಲ್ಲಿ ಇದು ಸಾಧ್ಯವಿಲ್ಲ.
ಅವರು ಯಾವ ಮುಲ್ಲಾ? ಕಲ್ಲು ಹೊಡೆದವರು ಅರೆಸ್ಟ್ ಆಗಬೇಕು ಹೆಣ್ಣು ಮಕ್ಕಳ ಮೇಲೆ ಲಾಠಿ ಬೀಸಿದ ಪೊಲೀಸರನ್ನು ಅಮಾನತು ಮಾಡಿ. ಆತ್ಮ ರಕ್ಷಣೆಗಾಗಿ ಹಿಂದೂಗಳು ತಿರುಗಿ ಬೀಳುತ್ತಾರೆ. ನೂರಾರು ವರ್ಷ ಆಕ್ರಮ ನಡೆದರೂ 80% ಹಿಂದೂಗಳಿದ್ದಾರೆ. ಹಿಂದೂಗಳು ಕಲ್ಲು ಬಿಸಾಡುವುದಿಲ್ಲ ಕಲ್ಲು ಬೀಸಾಡಿದ್ರೆ ಬಿಡಲ್ಲ. ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಿರುವ ಮಸೀದಿ ಬಾಗಿಲು ಮುಚ್ಚಿಸಿ ಎಂದು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಪ್ರತಿಭಟನೆಯ ವೇಳೆ ಪ್ರತಾಪ್ ಸಿಂಹ ಹೇಳಿಕೆ ನೀಡಿದರು.