ಬೆಂಗಳೂರು: ರಾಜ್ಯದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮೂಲಕ ವಿವಾಹ ನೋಂದಣಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸೋ ಪ್ರಕ್ರಿಯೆ ಜಾಲ್ತಿಯಲ್ಲಿದೆ. ಇದು ಕೆಲವರಿಗೆ ತಿಳಿದಿದ್ದರೇ, ಮತ್ತೆ ಕೆಲವರಿಗೆ ತಿಳಿದಿಲ್ಲ. ನೀವು ಮ್ಯಾರೇಜ್ ಸರ್ಟಿಫಿಕೇಟ್ ಗೆ ಅರ್ಜಿ ಸಲ್ಲಿಸಬೇಕು ಅನ್ನೋ ಯೋಚನೆಯಲ್ಲಿದ್ದರೇ, ಜಸ್ಟ್ ಮನೆಯಲ್ಲೇ ಕುಳಿತು, ಆನ್ ಲೈನ್ ಮೂಲಕ ನಾವು ಹೇಳುವಂತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ.
ರಾಜ್ಯ ಸರ್ಕಾರದಿಂದ ವಿವಾಹ ನೋಂದಣಿಯ ಆನ್ ಲೈನ್ ಪ್ರಕ್ರಿಯೆಯನ್ನು ಜಾರಿಗೊಳಿಸಲಾಗಿದೆ. ಆಪ್ ಲೈನ್ ಜೊತೆಗೆ, ನೀವು ರಾಜ್ಯದ ಯಾವುದೇ ಮೂಲೆಯಲ್ಲಿದ್ದರೂ, ಎಲ್ಲೇ ಮದುವೆಯಾಗಿದ್ದರೂ ಮ್ಯಾರೇಜ್ ಸರ್ಟಿಫಿಕೇಟ್ ಪಡೆಯಲು ಆನ್ ಲೈನ್ ಮೂಲಕ ಅರ್ಜಿಯನ್ನು ಕುಳಿತಲ್ಲಿಯೇ ಸಲ್ಲಿಸಬಹುದಾಗಿದೆ. ಆದರೇ ಇದಕ್ಕಾಗಿ ಕೆಲ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ಮ್ಯಾರೇಜ್ ಸರ್ಟಿಫಿಕೇಟ್ ಪಡೆಯಲು ಈ ದಾಖಲೆಗಳು ಕಡ್ಡಾಯ
- ಮದುವೆ ಲಗ್ನ ಪತ್ರಿಕೆ
- ದಂಪತಿಗಳ ಒಂದು ಪೋಟೋ
- ಪತಿಯ ಆಧಾರ್ ಕಾರ್ಡ್
- ಪತ್ನಿಯ ಆಧಾರ್ ಕಾರ್ಡ್
- ಮೂವರು ಸಾಕ್ಷಿದಾರರ ಆಧಾರ್ ಕಾರ್ಡ್
ಈ ಮೇಲ್ಕಂಡ ದಾಖಲೆಗಳನ್ನು ಪಿಡಿಎಫ್ ಮಾಡಿ, ನೀವು ಮೊಬೈಲ್ ನಲ್ಲಿ ರೆಡಿ ಇಟ್ಟುಕೊಂಡು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ https://kaveri.karnataka.gov.in/landing-page ಈ ಲಿಂಕ್ ಕ್ಲಿಕ್ ಮಾಡಿ, ಬಲಭಾಗದ ಮೇಲ್ಭಾಗದಲ್ಲಿ ಕಾಣುವಂತ ರಿಜಿಸ್ಟಾರ್ ಬಳಿಯಲ್ಲಿ ಕ್ಲಿಕ್ ಮಾಡಬೇಕಾಗಿದೆ. ಅಲ್ಲಿ ಕೇಳುವಂತ ನಿಮ್ಮ ಗುರುತಿನ ಮಾಹಿತಿ ನೀಡಿ, ನೋಂದಾಯಿಸಿಕೊಳ್ಳಿ.
ವಿವಾಹ ನೋಂದಣಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ.?
ನೋಂದಣಿ ಮತ್ತು ಮುದ್ರಾಂಕ ಇಲಾಖೆಯ https://kaveri.karnataka.gov.in/landing-page ಲಿಂಕ್ ನಲ್ಲಿ ನೋಂದಾಯಿಸಿಕೊಂಡ ನಂತ್ರ ಯೂಸರ್ ನೇಮ್ ಮತ್ತು ಪಾಸ್ವರ್ಡ್ ನಮೂದಿಸಿ ಲಾಗಿನ್ ಮಾಡಬೇಕಾಗುತ್ತದೆ. ಅಲ್ಲಿ ಪತಿಯ ದಾಖಲೆಯ ಅನುಸಾರವಾಗಿ ಪತಿಯ ಹೆಸರು, ಜನ್ಮ ದಿನಾಂಕ, ವಿಳಾಸವನ್ನು ನಮೂದಿಸಬೇಕು.
ಇದಾದ ಬಳಿಕ ಪತ್ನಿಯ ಹೆಸರು, ಜನ್ಮ ದಿನಾಂಕ, ವಿಳಾಸದ ಮಾಹಿತಿ ನಮೂದಿಸಬೇಕು. ಆ ಬಳಿಕ ಮೂವರು ಸಾಕ್ಷಿದಾರರ ಆಧಾರ್ ಕಾರ್ಡ್ ಮಾಹಿತಿಯಂತೆ ವಿಳಾಸ, ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಇದಾದ ಬಳಿಕ ಪತಿ-ಪತ್ನಿ ಮದುವೆಯಾದ ಸ್ಥಳ, ಕಲ್ಯಾಣ ಮಂಟಪದ ಹೆಸರು ಸೇರಿದಂತೆ ಇತರೆ ಮಾಹಿತಿ ನಮೂದಿಸಬೇಕು.
ಈ ಎಲ್ಲಾ ಮಾಹಿತಿ ನಮೂದಿಸಿದ ಬಳಿಕ ನಂತ್ರದ ಪುಟದಲ್ಲಿ ಈ ಮಾಹಿತಿಯ ಅನುಸಾರವಾಗಿ ಪತಿ-ಪತ್ನಿಯ ಆಧಾರ್ ಕಾರ್ಡ್, ವಿವಾಹದ ಲಗ್ನ ಪತ್ರಿಕೆ, ಮೂವರು ಸಾಕ್ಷಿದಾರರ ಆಧಾರ್ ಕಾರ್ಡ್ ಪ್ರತಿಯನ್ನು ಪಿಡಿಎಫ್ ಮಾದರಿಯಲ್ಲಿ ಅಪ್ ಲೋಡ್ ಮಾಡಬೇಕಿದೆ.
ಇ-ಕೆವೈಸಿ ಮಾಡೋದು ಕಡ್ಡಾಯ
ವಿವಾಹ ನೋಂದಣಿ ಪ್ರಮಾಣಕ್ಕಾಗಿ ದಾಖಲೆ ಸಲ್ಲಿಸಿದ ಬಳಿಕ ದಾಖಲೆಯಂತೆ ಪತಿ-ಪತ್ನಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ ಇ-ಸಹಿಯನ್ನು ಮಾಡಲು ಓಟಿಪಿಯನ್ನು ಪಡೆದು ನಮೂದಿಸುವುದು. ಸಾಕ್ಷಿದಾರರ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿಯೂ ಓಟಿಪಿ ಪಡೆದು ನಮೂದಿಸಿದರೇ ಇ-ಕೈವೈಸಿ ಮುಕ್ತಾಯವಾದಂತೆ. ಈ ಮೂಲಕ ಆನ್ ಲೈನ್ ನಲ್ಲಿಯೇ ಮ್ಯಾರೇಜ್ ಸರ್ಟಿಫಿಕೇಟ್ ಗೆ ಅರ್ಜಿಯನ್ನು ಕುಳಿತಲ್ಲೇ ನೀವು ಸಲ್ಲಿಸಬಹುದಾಗಿದೆ.
ಇದಾದ ನಂತ್ರ ಪತಿ-ಪತ್ನಿಯ ವಿಳಾಸದ ಅನುಸಾರ ಸಂಬಂಧಿಸಿದಂತ ಯಾವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಮ್ಯಾರೇಜನ್ ಪ್ರಮಾಣ ಪತ್ರ ಪಡೆಯಲು ನೋಂದಾಯಿಸುತ್ತಿರಿ ಎಂಬ ಮಾಹಿತಿಯನ್ನು ಕೇಳಲಿದೆ. ಪತಿ, ಪತ್ನಿ ವಿಳಾಸದ ಅನುಸಾರ ಮದುವೆಯಾದ ಸ್ಥಳದ ಮಾಹಿತಿ ಅನುಸಾರ ಮೂರು ಸಬ್ ರಿಜಿಸ್ಟಾರ್ ಕಚೇರಿಯ ಆಯ್ಕೆಯನ್ನು ನೀಡಲಿದೆ. ನೀವು ನಿಮಗೆ ಅನುಕೂಲವಾದಂತ ಎಸ್ಆರ್ ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಿದರೇ ಮುಕ್ತಾಯವಾಗಲಿದೆ.
ಇನ್ನೂ ಸಬ್ ರಿಜಿಸ್ಟಾರ್ ನಿಮ್ಮ ಅರ್ಜಿಯನ್ನು ಸಕಾಲದಡಿ ನಾಲ್ಕು ದಿನಗಳಲ್ಲಿ ಒಪ್ಪಿಗೆ ನೀಡಬೇಕು. ಇ ಸಹಿಯೊಂದಿಗೆ ಅರ್ಜಿಗೆ ಓಕೆ ಮಾಡಿದಾಗ ನೀವು ನಿಮ್ಮ ಅರ್ಜಿಗೆ 25 ರೂಪಾಯಿಯನ್ನು ಸೇವಾ ಶುಲ್ಕವಾಗಿ ಸಂದಾಯಿಸಿದರೇ ನಿಮ್ಮ ಮ್ಯಾರೇಜ್ ಸರ್ಟಿಫಿಕೇಟ್ ಸಿದ್ಧವಾದಂತೆಯೇ ಸರಿ. ಸೋ ಆನ್ ಲೈನ್ ಮೂಲಕ ನಿಮ್ಮ ವಿವಾಹ ನೋಂದಣಿಗೆ ಅರ್ಜಿಯನ್ನು ಸಲ್ಲಿಸಿ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ವಿಧಾನ ಪರಿಷತ್ ಸದಸ್ಯರಾಗಿ ‘ರಮೇಶ್ ಬಾಬು’ ನಾಮನಿರ್ದೇಶನ: ರಾಜ್ಯ ಸರ್ಕಾರ ಅಧಿಕೃತ ಆದೇಶ
SHOCKING : ವಿವಾಹಿತನಿಂದ ನಿರಂತರ ಅತ್ಯಾಚಾರ : ಮಗುವಿಗೆ ಜನ್ಮ ನೀಡಿದ 11 ವರ್ಷದ ಬಾಲಕಿ.!