ದಕ್ಷಿಣಕನ್ನಡ : ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಮಾಸ್ಕ್ ಮ್ಯಾನ್ ಚಿನ್ನಯ್ಯನಿಗೆ ಬುರುಡೆಯನ್ನು ತಂದುಕೊಟ್ಟಿದ್ದೇ ಸೌಜನ್ಯ ಮಾವ ಎಂಬುದಾಗಿ ತಿಳಿದು ಬಂದಿದೆ.
ಹೌದು ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಬುರುಡೆ ತಂದು ಕೊಟ್ಟಿದ್ದೇ ಸೌಜನ್ಯ ಮಾವ ವಿಠಲ್ ಗೌಡ ಎಂಬುದಾಗಿ ಎಸ್‌ಐಟಿ ವಿಚಾರಣೆ ವೇಳೆಯಲ್ಲಿ ತಿಳಿದು ಬಂದಿದೆ.ಹೀಗಾಗಿ ಯಾವುದೇ ಕ್ಷಣದಲ್ಲಿ ಎಸ್‌ಐಟಿಯಿಂದ ವಿಠಲ್ ಗೌಡ ಅರೆಸ್ಟ್ ಆಗುವ ಸಾಧ್ಯತೆ ಇದೆ. ಅಂದಹಾಗೇ ಚಿನ್ನಯ್ಯ ಹಾಗೂ ವಿಠಲ್ ಗೌಡ ಜೊತೆಗೆ ಹಳೆಯ ಸ್ನೇಹ ಸಂಬಂಧವಿತ್ತಂತೆ. ನೇತ್ರಾವತಿ ನದಿ ತೀರದಲ್ಲಿ ಚಿಕ್ಕ ಹೋಟೆಲ್ ಅನ್ನು ವಿಠಲ್ ಗೌಡ ನಡೆಸುತ್ತಿದ್ದಾರೆ. ಇಂತಹ ವಿಠಲ್ ಗೌಡ ಅವರ ಅಂಗಡಿಯಲ್ಲೇ ಚಿನ್ನಯ್ಯ ತಂಗುತ್ತಿದ್ದರಂತೆ.
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಸಂಜೆ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಸ್ಥಳ ಮಹಜರು ಮಾಡಲಾಗಿದೆ. ವಿಶೇಷ ತನಿಖಾ ತಂಡದ ಪೊಲೀಸರು ಸೌಜನ್ಯಳ ಮಾವ ವಿಠಲ ಗೌಡ ಅವರನ್ನು ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟ ಬಳಿ ಇರುವ ಬಂಗ್ಲೆಗುಡ್ಡಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದ್ದಾರೆ. ಸ್ಥಳ ಮಹಜರು ಮಾಡಿದ ಬಳಿಕ ರಾತ್ರಿ 8 ಗಂಟೆಯ ವೇಳೆಗೆ ಬೆಳ್ತಂಗಡಿ ಠಾಣೆಗೆ ಮರಳಿದ್ದಾರೆ.