ಬೆಂಗಳೂರು: ಸೀಟ್ ಬೆಲ್ಟ್ ಧರಿಸದ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧದ ಸಂಚಾರ ನಿಮಯ ಉಲ್ಲಂಘನೆಯ ಪ್ರಕರಣದ ಬೆನ್ನಲ್ಲೇ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಾರಿನ ಮೇಲೆಯೂ ಸಂಚಾರ ನಿಯಮ ಉಲ್ಲಂಘನೆಯ 10 ಕೇಸ್ ಗಳಿರುವುದಾಗಿ ತಿಳಿದು ಬಂದಿದೆ. ಅಲ್ಲದೇ ಈ ಕೇಸ್ ಗಳ ದಂಡವನ್ನು ಅವರು ಶೇ.50ರ ರಿಯಾಯಿತಿಯಲ್ಲಿ ಪಾವತಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಕೆಎ 03, ಎಂವೈ 4545 ಕಾರನ್ನು ತಮ್ಮ ಸಂಚಾರಕ್ಕೆ ಬಳಸುತ್ತಿದ್ದಾರೆ. ಹೀಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬಳಸುವಂತ ಕಾರಿನ ಮೇಲೆ ಸೀಟ್ ಬೆಲ್ಟ್ ಹಾಕಿರದೇ ಇರೋದು, ಓವರ್ ಸ್ಪೀಡ್, ಟ್ರಾಫಿಕ್ ಸಿಗ್ನಲ್ ಜಂಪಿಂಗ್, ಜೀಬ್ರಾ ಕ್ರಾಸಿಂಗ್ ಮಾಡಿದ್ದಕ್ಕೆ 10 ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿವೆ.
ಶೇ.50ರಷ್ಟು ರಿಯಾಯಿತಿಯಂತೆ ರೂ.3250 ದಂಡವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪಾವತಿಸಿದ್ದಾರೆ. 2020ರಿಂದಲೂ ದಂಡ ಪಾವತಿಸದೇ ಬಾಕಿಯನ್ನು ಬಿವೈ ವಿಜಯೇಂದ್ರ ಉಳಿಸಿಕೊಂಡಿದ್ದರು. ಈ ದಂಡವನ್ನು ಪಾವತಿಸುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಿನ್ನಲೆಯಲ್ಲಿ ಇದೀಗ ಬಿವೈ ವಿಜಯೇಂದ್ರ ಸಂಚಾರ ನಿಯಮ ಉಲ್ಲಂಘನೆಯ ದಂಡವನ್ನು ಪಾವತಿಸಿದ್ದಾರೆ.