ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಬೀದಿ ನಾಯಿಗಳಿಂದ ಮಕ್ಕಳು ಹಿರಿಯರು ಸಹ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದೀಗ ಬಾಲಕಿಯ ಮೇಲೆ ಬೀದಿ ನಾಯಿಗಳು ಡೆಡ್ಲಿ ಅಟ್ಯಾಕ್ ನಡೆಸಿವೆ.
ಐದು ಬೀದಿ ನಾಯಿಗಳು ಬಾಲಕಿಯ ಮೇಲೆ ದಾಳಿ ಮಾಡಿವೆ. ಬೆಂಗಳೂರಿನ ಹೊಸಕೋಟೆ ಗೋಕುಲ್ ಡೈರಿ ರಸ್ತೆ ಬಳಿ ಈ ಒಂದು ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಗೋಕುಲ್ ಡೈರಿ ರಸ್ತೆ ಬಳಿ ಬಾಲಕಿ ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆ ನಾಯಿಗಳು ಅಟ್ಯಾಕ್ ಮಾಡಿವೆ ತಕ್ಷಣ ಅಲ್ಲಿಯೇ ಮನೆಯಲ್ಲಿದ್ದ ಮಹಿಳೆ ನಾಯಿಗಳನ್ನ ಓಡಿಸಿದ್ದಾರೆ. ಸ್ಥಳೀಯ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ಒಂದು ತಪ್ಪಿದೆ