ಉತ್ತರಕನ್ನಡ : ಅಡಕೆ ತೋಟಕ್ಕೆ ಬಳಸುತ್ತಿದ್ದ ಏರ್‌ಗನ್ ನಿಂದ ವ್ಯಕ್ತಿ ಗುಂಡು ಹಾರಿಸಿದ್ದರಿಂದ 9 ವರ್ಷದ ಬಾಲಕ ಮೃತಪಟ್ಟಿರುವ ಉ.ಕನ್ನಡದ ಘಟನೆ ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿ ಚಿಪಗಿ ಸಮೀಪದ ಸೋಮನಳ್ಳಿಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆ ಹೊಸಕಿತ್ತೂರಿನ ಕರಿ ಯಪ್ಪಬಸಪ್ಪ ಉಂಡಿ (9) ಮೃತ ಬಾಲಕ ಎಂದು ತಿಳಿದುಬಂದಿದೆ.
ಕೊಲೆ ಆರೋಪದ ಮೇಲೆ ನಿತೀಶ ಲಕ್ಷ್ಮಣ ಗೌಡ ಲೈಸನ್ಸ್ ಪಡೆಯದೇ ಏರ್ ಗನ್ ಇಟ್ಟುಕೊಂಡಿದ್ದ ರಾಘವ ಹೆಗಡೆ ಎಂಬುವರನ್ನು ಬಂಧಿಸಲಾಗಿದೆ. ಹೊಸಕಿತ್ತೂರಿನ ಬಸಪ್ಪ ಉಂಡಿ ಎನ್ನು ವವರು ತನ್ನ ಪತ್ನಿ ಹಾಗೂ ಮೂವರು ಮಕ್ಕಳ ಜತೆ ಸೋಮನಳ್ಳಿಯಲ್ಲಿ ವಾಸವಿದ್ದು, ರಾಘವ ಹೆಗಡೆ ಅವರ ತೋಟದ ಕೆಲಸ ಮಾಡಿಕೊಂಡಿದ್ದರು. ರಾಘವ ಲೈಸನ್ಸ್ ಇಲ್ಲದ ಏರ್‌ಗನ್ ಇಟ್ಟುಕೊಂಡು ತೋಟದಲ್ಲಿ ಮಂಗಗಳ ಉಪಟಳ ನಿಯಂತ್ರಿಸಲು ನಿತೀಶ, ಲಕ್ಷ್ಮಣಗೌಡಗೆ ನೀಡಿದ್ದರು.
ಈ ಮೂವರು ಮಕ್ಕಳು ಶುಕ್ರವಾರ ಆಟವಾಡುವಾಗ ನಿತೀಶ ಗೌಡ ಮಕ್ಕಳನ್ನು ಬೆದರಿಸುತ್ತಾ ಏರ್‌ಗನ್‌ನಿಂದ ಕರಿಯಪ್ಪನ ಎದೆಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ ಎಂದು ಬಾಲಕನ ತಾಯಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿ, ಕೋಟ್ ೯ಗೆ ಹಾಜರುಪಡಿಸಿದ್ದಾರೆ. ಪೋಷಕರು ಆದಷ್ಟು ಇಂತಹ ವಸ್ತುಗಳನ್ನು ಮಕ್ಕಳ ಕೈಗೆ ಸಿಗದಂತೆ ಇಡೋದು ಒಳ್ಳೆಯದು ಇಲ್ಲವಾದರೆ ಇಂತಹ ದುರ್ಘಟನೆಗಳು ಸಂಭವಿಸುತ್ತವೆ.