ಚಿಕ್ಕಮಗಳೂರು : ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿಚಾರವಾಗಿ ನಾವು ಮುಸ್ಲಿಂ ಎನ್ನುವ ಕಾರಣಕ್ಕೆ ಯಾರನ್ನು ವಿರೋಧ ಮಾಡಿಲ್ಲ ಎಂದು ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದರು. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ನಿನ್ನೆ ಸಂಜೆ ನಡೆದ ಕಾರ್ಯಕ್ರಮದಲ್ಲಿ ದಸರಾ ಹಿಂದೂ ಸಂಪ್ರದಾಯದ ಪ್ರತೀಕವಾಗಿ ಉತ್ಸವ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರತಾಪ್ ಸಿಂಹ ಬಾನು ಮುಷ್ತಾಕ್ ದಸರಾ ಉದ್ಘಾಟನೆ ಬಗ್ಗೆ ಈ ಮೊದಲೇ ಪ್ರತಿಕ್ರಿಯೆ ನೀಡಿದ್ದೇನೆ. ಮೈಸೂರು ದಸರಾದಲ್ಲಿ 9 ದಿನಗಳ ಕಾಲ ಆರಾಧನೆ ನಡೆಯುತ್ತದೆ. ತಾಯಿ ಚಾಮುಂಡೇಶ್ವರಿಗೆ ವಿವಿಧ ಅಲಂಕಾರ ಮಾಡಲಾಗಿರುತ್ತದೆ. ಇದು ನೂರಕ್ಕೆ ನೂರು ಧಾರ್ಮಿಕ ಕಾರ್ಯಕ್ರಮ ಎಂದದ್ದೆ. ಯಾವನೋ ಘಜ್ನಿ, ಅಕ್ಬರ್ ಬಾಬರ್ ಬಂದಿದ್ದ ಅಂತ ಹೇಳಬೇಡಿ ಎಂದರು.
ಬಾಬರ್ ಇಲ್ಲದೆ ಇದ್ದರೂ ಮುಷ್ತಾಕ್ ಅಂತವರು ನಮ್ಮ ಮಧ್ಯೆ ಇದ್ದಾರೆ ಅದಕ್ಕಾಗಿ ಎಚ್ಚರಿಕೆ ನೀಡಲು ನಾನು ಬಂದಿದ್ದೇನೆ. ದೇಶ ಉಳಿಸಿಕೊಳ್ಳಲು ಹಿಂದೂಗಳು ಜಾತಿ ಬಿಟ್ಟು ಒಂದಾಗಬೇಕು ನಾವು ಮುಸ್ಲಿಂ ಎನ್ನುವ ಕಾರಣಕ್ಕೆ ಯಾರನ್ನು ವಿರೋಧ ಮಾಡಿಲ್ಲ. ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದ್ದು ಇದೆ ಬಿಜೆಪಿ. ಬಿಸ್ಮಿಲ್ಲಾ ಖಾನ್ ಅವರಿಗೆ ಭಾರತರತ್ನ ಕೊಟ್ಟಿದ್ದು ವಾಜಪೇಯಿ ಎಂದು ತರೀಕೆರೆ ಪಟ್ಟಣದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದರು.