ಬೆಂಗಳೂರು : ಈ ಬಾರಿ ನವರಾತ್ರಿಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಜನತೆಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದು ಔಷಧಿ ಆಟೊಮೊಬೈಲ್ ಸೇರಿದಂತೆ ಹಲವು ವಸ್ತುಗಳ ಮೇಲಿನ ಜಿ ಎಸ್ ಟಿ ದರ ಭಾರಿ ಇಳಿಕೆ ಮಾಡಿ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈ ವಿಚಾರವಾಗಿ ಕಂದಾಯ ಸಚಿವ ಕೃಷ್ಣಭೇರೇಗೌಡ ಅವರು ಕೇಂದ್ರ ಸರ್ಕಾರದ ಡಿಎಸ್‌ಟಿ ತೀರ್ಮಾನಗಳಿಂದ ರಾಜಕೀಯ ವಾರ್ಷಿಕ 70,000 ಕೋಟಿ ಖೋತಾ ಆಗಲಿದೆ ರಾಜ್ಯಕ್ಕೆ ಆರ್ಥಿಕ ಹೊರೆ ಆಗಬಹುದು ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು.
ಕೇಂದ್ರದ ತೀರ್ಮಾನಗಳಿಂದ 2016-17 ಮತ್ತು 2024-25ರ ನಡುವೆ ಆಗಿರುವಂತಹ ಕರ್ನಾಟಕಕ್ಕೆ ಆದಾಯದ ಖೋತಾ 70 ಸಾವಿರ ಕೋಟಿ. ಇದು ರಾಜ್ಯದ ಪರಿಸ್ಥಿತಿ ಆಗಿದ್ದು ಬೇರೆ ಬೇರೆ ರಾಜ್ಯಗಳದ್ದು ಬೇರೆ ಬೇರೆ ರೀತಿ ಇರಬಹುದು. 2024 ಮತ್ತು 25ನೇ ಸಾಲಿಗೆ 70 ಸಾವಿರ ಕೋಟಿ ಒಂದು ವರ್ಷಕ್ಕೆ ಮಾತ್ರ ಖೋತ ಆಗಲಿದೆ ಎಂದು ದರ ಸರಳಿಕರಣದಿಂದ ಆಗುವ ಅವರ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು. ಆರ್ಥಿಕವಾಗಿ ಮತ್ತಷ್ಟು ಹೊರೆಯಾಗುವ ಆತಂಕದ ಕುರಿತು ಕೃಷ್ಣ ಭೈರೇಗೌಡ ಕಳವಳ ವ್ಯಕ್ತಪಡಿಸಿದರು.