ರಾಯಚೂರು : ರಾಯಚೂರಿನಲ್ಲಿ ಬಿಹಾರ್ ಮೂಲದ ಶಂಕಿತ ನಕ್ಸಲ್ ಅರೆಸ್ಟ್ ಬಿಹಾರ ಪೊಲೀಸರು ಹಾಗೂ ರಾಯಚೂರು ಗ್ರಾಮೀಣ ಪೊಲೀಸರ ಕಾರ್ಯಾಚರಣೆ ನಡೆಸಿ ಅರೆಸ್ಟ್ ಮಾಡಿದ್ದಾರೆ. ಬಿಹಾರ್ ಮೂಲದ ನಕ್ಸಲ್ ಮನೋಜ್ ಸದಾ ಎನ್ನುವ ನಕ್ಸಲ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಮನೋಜ್ ವಿರುದ್ಧ ಕೊಲೆ ಸುಲಿಗೆ ಜೀವ ಬೆದರಿಕೆ ಆರೋಪ ಕೇಳಿ ಬಂದಿದ್ದು, ರಾಯಚೂರಿನ ಯರಮರಸ ಇಂಡಸ್ಟ್ರಿಯಲ್ ಏರಿಯಾದಲ್ಲಿ ಅರೆಸ್ಟ್ ಮಾಡಲಾಗಿದೆ. ಖಾಸಗಿ ರೈಸ್ ಮಿಲ್ ಒಂದರಲ್ಲಿ ಆರೋಪಿ ಮನೋಜ್ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಅರೆಸ್ಟ್ ಬಳಿಕ ಮನೋಜನನ್ನು ಪೊಲೀಸರು ಕೋರ್ಟ್ ಗೆ ಹಾಗಿರುಪಡಿಸಿ ಬಿಹಾರ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.