ಬೆಂಗಳೂರು : ಆಂಧ್ರದ ನೆಲಮಲ್ಲ ಅರಣ್ಯದಿಂದ ಅಕ್ರಮವಾಗಿ ರಕ್ತ ಚಂದನ ಸಾಗಾಟ ಮಾಡಲಾಗುತ್ತಿದ್ದು ಹೊಸಕೋಟೆ ತಾಲೂಕಿನ ಕಟ್ಟಿಗೆಹಳ್ಳಿಗೆ ರಕ್ತಚಂದನ ತಂದು ಸಾಗಾಟ ಮಾಡಲಾಗುತ್ತಿತ್ತು. ಹೊಸಕೋಟೆಯ ಬಳಿ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಮೂರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಹೌದು 25 ಲಕ್ಷ ಮೌಲ್ಯದ ಒಂದು ಕೆಜಿ ತೂಕದ ರಕ್ತ ಚಂದನದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಕಟ್ಟಿಗೆನಹಳ್ಳಿ ಇಂದ ಟಾಟಾ ಎಸ್ ವಾಹನದಲ್ಲಿ ತಂದು ಪಾರ್ಸೆಲ್ ಮಾಡುತ್ತಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕಟ್ಟಿಗೆಹಳ್ಳಿಯಲ್ಲಿ ರಕ್ತ ಚಂದನ ತುಂಡುಗಳನ್ನು ಕೊರಿಯರ್ ಮೂಲಕ ಕಳುಹಿಸಲು ಪ್ರಯತ್ನಿಸಿದ್ದರು.ಡೆಲಿವರಿ ಟ್ರಾನ್ಸ್ಪೋರ್ಟ್ ಕಂಪನಿಯ ಮೂಲಕ ಹರಿಯಾಣಕ್ಕೆ ರಫ್ತು ಮಾಡಲು ಯತ್ನಿಸಿದ್ದಾರೆ.
ಈ ಕುರಿತು ಖಚಿತ ಮಾಹಿತಿ ಮೇರೆಗೆ ಹೊಸಕೋಟೆ ಪೋಲಿಸರು ದಾಳಿ ನಡೆಸಿದ್ದಾರೆ. ಏಜಾಜ್ ಷರೀಫ್, ಫಯಾಜ್ ಷರೀಫ್ ಹಾಗು ಸಾಧಿಕ್ ಖಾನ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದ್ದು, ರಕ್ತ ಚಂದನ ಸಾಗಾಟಕ್ಕೆ ಬಳಸಿದ್ದ ಟಾಟಾ ಏಸ್ ವಾಹನ ಜಪ್ತಿ ಮಾಡಿಕೊಂಡಿದ್ದಾರೆ. ಘಟನೆ ಕುರಿತಂತೆ ಹೊಸಕೋಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.