ಉಡುಪಿ : ರಾಜ್ಯದಲ್ಲಿ ಮತ್ತೊಂದು ಘೋರವಾದ ದುರಂತ ಒಂದು ನಡೆದಿದ್ದು, ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ತಾನು ಹೆತ್ತ ಮಗುವನ್ನೇ ತಾಯಿಯೊಬ್ಬಳು ನೇಣು ಬಿಗಿದು ಕೊಂದ ಬಳಿಕ ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ.
ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜಾಲು ಹೇರಂಜೆ ಕ್ರಾಸ್ ಬಳಿ 1 ವರ್ಷ 6 ತಿಂಗಳ ಮಗುವನ್ನು ನೇಣಿಗೆ ಹಾಕಿದ ಸುಷ್ಮಿತಾ (23) ಆತ್ಮಹತ್ಯೆ ಮಾಡಿಕೊಂಡ ತಾಯಿ ಎಂದು ತಿಳಿದು ಬಂದಿದೆ.ನನ್ನ ಸಾವಿಗೆ ನಾನೇ ಕಾರಣ ಎಂಬುದಾಗಿ ಮರಣ ಪತ್ರ ಬರೆದಿಟ್ಟು ಸುಷ್ಮಿತಾ ತನ್ನ ಮಗು ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಕೂಡ ತಮ್ಮ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಹೆಚ್ಚುವರಿ ಮಾಹಿತಿ ಕಲೆ ಹಾಕಿದರು.