ರಾಮನಗರ : ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೆ.ಎನ್ ರಾಜಣ್ಣ ಬಿಜೆಪಿಗೆ ಅರ್ಜಿ ಹಾಕಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಎಚ್ ಸಿ ಬಾಲಕೃಷ್ಣ ಹೊಸ ಬಾಂಬ್ ಒಂದು ಸಿಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಣ್ಣರ ಬ್ರೈನ್ ಮ್ಯಾಪಿಂಗ್ ಆದರೆ ಎಲ್ಲವೂ ಗೊತ್ತಾಗುತ್ತದೆ. ಯಾರ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿಯಲಿದೆ ನಮ್ಮ ಸರ್ಕಾರ ಇದೆ ಎಂದು ಪಕ್ಷದಲ್ಲಿ ಇದ್ದಾರೆ. ಇಲ್ಲದಿದ್ದರೆ ಎಷ್ಟೊತ್ತಿಗೆ ಅವರು ಪಕ್ಷ ಬಿಟ್ಟು ಹೋಗುತ್ತಿದ್ದರು . ಈಗಾಗಲೇ ರಾಜಣ್ಣ ಒಂದು ಹೆಜ್ಜೆ ಹೊರಗಡೆ ಇಟ್ಟಿದ್ದಾರೆ ಬೇರೆ ಬೇರೆ ನಾಯಕರಾದ ಜೊತೆಗೆ ಸಂಪರ್ಕದಲ್ಲಿ ಇದ್ದಾರೆ ಎಂದರು.
ಕೆಎನ್ ರಾಜಣ್ಣ ತಮ್ಮ ಮಾತಿನಿಂದಲೇ ಕೆಟ್ಟು ಹೋದರು ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಎಂಬ ಮಾತಿದೆ. ಇದರಲ್ಲಿ ನಮ್ಮ ನಾಯಕರ ಷಡ್ಯಂತರ ಇಲ್ಲವೇ ಇಲ್ಲ. ಪಕ್ಷದ ಮೇಲೆ ಗೂಬೆ ಕೂರಿಸಲು ಪಿತೂರಿ ನಡೆಯುತ್ತಿದೆ ನಡೆಸಲಿ. ಡೆಲ್ಲಿ ಸಮಾವೇಶ ಮಾಡಲಿ ನಾವು ಹಿಡಿದುಕೊಳ್ಳಲು ಆಗುತ್ತಾ ಎಂದು ಬಾಲಕೃಷ್ಣ ಹೇಳಿಕೆ ನೀಡಿದರು.