ಬೆಂಗಳೂರು : ಬೆಂಗಳೂರಿನಲ್ಲಿ ನಿನ್ನೆ ಭಾರಿ ಮಳೆ ಸುರಿದಿದ್ದು ರಾತ್ರಿ ಘೋರ ದುರಂತ ಒಂದು ಸಂಭವಿಸಿದೆ. ಈ ವೇಳೆ ಜೋರಾದ ಮಳೆ ಸುರಿದಿದ್ದು, ನಿರ್ಮಾಣ ಹಂತದ ಕಟ್ಟಡ ಪಕ್ಕದಲ್ಲಿದ್ದ ಮಣ್ಣು ಕುಸಿದು ಆಂಧ್ರಪ್ರದೇಶ ಮೂಲದ ಕಾರ್ಮಿಕ ಸಾವನ್ನಪ್ಪಿದ್ದ ಆದರೆ ಇದೀಗ ಮತ್ತೊಂದು ಕಾರ್ಮಿಕ ದುರಂತದಲ್ಲಿ ಸಾವನಪ್ಪಿದ್ದಾನೆ.
ಮಣ್ಣಿನಡಿ ಸಿಲುಕಿ ಮೃತಪಟ್ಟವರ ಸಂಖ್ಯೆ ಇದೀಗ ಎರಡಕ್ಕೆ ಏರಿದೆ ಜೆ.ಶಿವ ಹಾಗೂ ಮಧುಸೂದನ್ ರೆಡ್ಡಿ ಮೃತಕಾರ್ಮಿಕರು ಎಂದು ತಿಳಿದುಬಂದಿದೆ. ಇಬ್ಬರು ಆಂಧ್ರಪ್ರದೇಶದ ಮೂಲದ ಕಟ್ಟಡ ಕಾರ್ಮಿಕರು ಎಂದು ತಿಳಿದುಬಂದಿದೆ ಸದ್ಯ ಮೃತ ದೇಹ ಯಲಹಂಕ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ.