ಹುಬ್ಬಳ್ಳಿ : ಹುಬ್ಬಳ್ಳಿಯ ಈದ್ಗ ಮೈದಾನ ಹೆಸರು ಬದಲಾವಣೆಗೆ ಇದೀಗ ಬಿಜೆಪಿ ಮುಂದಾಗಿದೆ. ಹುಬ್ಬಳ್ಳಿ ಮತ್ತು ಧಾರವಾಡ ಮಹಾನಗರ ಪಾಲಿಕೆ ಚುಕ್ಕಾಣಿ ಹಿಡಿದಿರುವ ಬಿಜೆಪಿ ಹುಬ್ಬಳ್ಳಿ ನಗರದ ಹೃದಯ ಭಾಗದಲ್ಲಿರುವ ಈ ವಿಧಾನದ ಹೆಸರು ಬದಲಾವಣೆಗೆ ಮುಂದಾಗಿದೆ ಅದಕ್ಕೆ ರಾಣಿ ಚೆನ್ನಮ್ಮ ಮೈದಾನ ಎಂದು ಹೆಸರು ಬದಲಾವಣೆ ಮಾಡಲು ಬಿಜೆಪಿ ಮುಂದಾಗಿದೆ.
2022 ರಲ್ಲಿ ಈದ್ಗ ಮೈದಾನದ ಹೆಸರು ಬದಲಾವಣೆಗೆ ಠರಾವು ಪಾಸ್ ಮಾಡಿತ್ತು. ರಾಣಿ ಚೆನ್ನಮ್ಮ ಮೈದಾನ ಅಂತ ಹೆಸರು ಬದಲಾಯಿಸಲು ಠರಾವು ಪಾಸ್ ಮಾಡಿತ್ತು. ಇದೀಗ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಹೆಸರು ಬದಲಾವಣೆ ಮಾಡಲು ನಿರ್ಧರಿಸಿದ್ದು, ಹೆಸರು ಬದಲಿಸಿ, ಹುಬ್ಬಳ್ಳಿ ಧಾರವಾಡ ಪಾಲಿಕೆ ಮುಂದಾಗಿದೆ. ಹುಬ್ಬಳ್ಳಿ ನಗರದ ಹೃದಯ ಭಾಗದಲ್ಲಿ 1.5 ಎಕರೆ ವಿಸ್ತೀರ್ಣದಲ್ಲಿ ಈದ್ಗಾ ಮೈದಾನವಿದೆ.
ಸದ್ಯ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ದಿನದಲ್ಲಿರುವ ಜಾಗ ಇದರಿಂದ ಹೆಸರು ಬದಲಿಸುವ ಅಧಿಕಾರ ಪಾಲಿಕೆಗೆ ಇದೆ ಎಂದ ಬಿಜೆಪಿ ಆದರೆ ಇದಕ್ಕೆ ಕಾಂಗ್ರೆಸ್ ನಾಯಕರು ಮತ್ತು ವ್ಯಕ್ತಪಡಿಸಿದ್ದು ಬಿಜೆಪಿ ಮತ್ತು ಸೃಷ್ಟಿಸಲು ಮುಂದಾಗಿದೆ ಅಂತ ಆರೋಪಿಸಿದೆ ಅಭಿವೃದ್ಧಿ ಬಿಟ್ಟು ಭಾವನೆಗಳ ಜೊತೆ ಚೆಲ್ಲಾಟ ಮಾಡುತ್ತಿದ್ದಾರೆ ಅಂತ ಆರೋಪಿಸಿದ್ದಾರೆ. ಈ ಹಿಂದೆ ರಾಷ್ಟ್ರಾದ್ಯಂತ ಈದ್ಗ ಮೈದಾನ ವಿಚಾರ ಸದ್ದು ಮಾಡಿತ್ತು.