ಬೆಂಗಳೂರು : ನಿನ್ನೆ ತಾನೇ ಆಸ್ತಿ ನೋಂದಣಿ ಹಾಗು ಮುದ್ರಾಂಕ ಶುಲ್ಕ ಹೆಚ್ಚಳ ಮಾಡಿ ಕಂದಾಯ ಇಲಾಖೆ ಆದೇಶ ಹೊರಡಿಸಿತ್ತು. ಇದೀಗ ಹಲವು ವರ್ಷಗಳಿಂದತೆರಿಗೆ ಬಾಕಿ ಉಳಿಸಿಕೊಂಡಿರುವ 2.75 ಲಕ್ಷ ಆಸ್ತಿ ತೆರಿಗೆ ಸುಸ್ತಿದಾರರಿಗೆ ಬಿಬಿಎಂಪಿ ಡಿಮ್ಯಾಂಡ್ ನೋಟಿಸ್ ಜಾರಿ ಮಾಡಿದೆ.
ನೋಟಿಸ್ ಜಾರಿ ಮಾಡಲಾಗಿರುವ ಸುಸ್ತಿದಾರರಿಂದ 786 ಕೋಟಿ ರು. ತೆರಿಗೆ ಬಾಕಿ ಬರಬೇಕಿದೆ. ಸುಸ್ತಿದಾರರು ಕೂಡಲೇ www.BBMPtax.karnataka.gov. inನಲ್ಲಿ ಆನ್‌ಲೈನ್ ಮೂಲಕ ಬಾಕಿ ತೆರಿಗೆ ಪಾವತಿಸಬೇಕಿದೆ. ಇಲ್ಲದಿದ್ದರೆ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದರ ಜತೆಗೆ ಚರ ಮತ್ತು ಸ್ಥಿರಾಸ್ತಿಗಳನ್ನು ಬಾಕಿ ತೆರಿಗೆ ವಸೂಲಿ ಮಾಡಲಾಗುವುದು ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.
ಸದ್ಯ ತೆರಿಗೆ ಬಾಕಿ ಉಳಿಸಿಕೊಂಡವರ ಪೈಕಿ ಮಹ ದೇವಪುರ ವಲಯದಲ್ಲಿ 65 ಸಾವಿರ ಸುಸ್ತಿದಾರರು 197 ಕೋಟಿ ರು., ದಕ್ಷಿಣ ವಲಯದ 25,162 ಸುಸ್ತಿದಾರರು 116 ಕೋಟಿ ರು., ಪೂರ್ವ ವಲಯ 37,574 ಸುಸ್ತಿದಾರರು 115 ಕೋಟಿ ರು., ಬೊಮ್ಮನಹಳ್ಳಿ ವಲಯ 45,293 ಸುಸ್ತಿದಾರರು 107 ಕೋಟಿ ರು., ಯಲಹಂಕ ವಲಯ 28,022 ಸುಸ್ತಿದಾರರು 80.61 ಕೋಟಿ ರು., ಪಶ್ಚಿಮ ವಲಯ 25,312 ಸುಸ್ತಿದಾರರು 75.28 ಕೋಟಿ ರು., ರಾಜರಾಜೇಶ್ವರಿನಗರ ವಲಯ 38,358 ಸುಸ್ತಿದಾರರು 64.84 ಕೋಟಿ ರು. ಹಾಗೂ ದಾಸರಹಳ್ಳಿ ವಲಯದ 11,172 ಸುಸ್ತಿದಾರರು 28.82 ಕೋಟಿ ರು. ಬಾಕಿ ತೆರಿಗೆ ಪಾವತಿಸಬೇಕಿದೆ.