ರಾಯಚೂರು : ಭ್ರಷ್ಟ ಅಧಿಕಾರಿಗಳ ಚಳಿ ಬಿಡಿಸುವ ಉಪ ಲೋಕಾಯುಕ್ತ ನ್ಯಾ ಬಿ. ವೀರಪ್ಪಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆದರಿಕೆ ಇರುವ ಬಗ್ಗೆ ಇದೀಗ ವೀರಪ್ಪ ಮಾಹಿತಿ ನೀಡಿದ್ದಾರೆ.
ನಾನು ನಡೆಸುತ್ತಿರುವ ತನಿಖೆಯ ದಾಳಿಗೆ ಸಂಬಂಧಿಸಿದಂತೆ ನನಗೆ ಬೆದರಿಕೆ ಹಾಕಿದ್ದಾರೆ. ಮಿಟ್ಟಿ ಮಲ್ಕಾಪುರದ ಕಲ್ಲು ಗಣಿಗಾರಿಕೆಯ ಮೇಲೆ ದಾಳಿ ಮಾಡಿದ ವೇಳೆ ಬೆದರಿಕೆ ಹಾಕಿದ್ದಾರೆ ರಾಯಚೂರು ತಾಲೂಕಿನ ಮಿಟ್ಟಿ ಮಲಕಾಪುರ ಗ್ರಾಮದಲ್ಲಿ ದಾಳಿ ವೇಳೆ ಗಣಿಗಾರಿಕೆ ನಡೆಸುತ್ತಿದ್ದರು. ಈ ವೇಳೆ ಅವರಿಗೆ ತರಾಟೆಗೆ ತೆಗೆದುಕೊಂಡಿದೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಾರ್ಮಿಕ ಇಲಾಖೆ, ಆರ್ಟಿಓ, ಜೆಸ್ಕಾಂ ಹಾಗೂ ಮಾಲಿನ್ಯ ನಿಯಂತ್ರಣ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಸೂಚನೆ ನೀಡಿದೆ ನಾಲ್ಕು ಇಲಾಖೆ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ದೂರಿಗೆ ಸೂಚನೆ ನೀಡಿದೆ. ಈ ಸಂಬಂಧ ತನಿಖೆ ನನಗೆ ಬೆದರಿಕೆ ಬಂದಿದೆ.
ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಬೆದರಿಕೆಗಳು ಬರುತ್ತವೆ.ಇದೆಲ್ಲ ಸಹಜ ನನಗೆ 65 ವರ್ಷ ನಾನು ಸತ್ತರೆ ಪುಟಗೋಸಿ ಹೊಯ್ತು ಅಂತೀನಿ. ಜೀವ ಬೆದರಿಕೆ ಹಿನ್ನೆಲೆ ಪಿಸ್ತೂಲ್ ತೆಗೆದುಕೊಂಡಿದ್ದೇನೆ ನನಗೆ ಗನ್ ಮ್ಯಾನ್ ಸಹ ಕೊಟ್ಟಿದ್ದಾರೆ ಎಂದು ತಿಳಿಸಿದರು.








