ದಕ್ಷಿಣಕನ್ನಡ : ಅನನ್ಯ ಭಟ್ ನಬತ್ತೆ ಆಗಿರುವ ಕುರಿತು ದೂರು ನೀಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಸತತ ನಾಲ್ಕು ದಿನಗಳಿಂದ ಸುಜಾತ ಭಟ್ ಅವರನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು ಎಸ್ಐಟಿ ವಿಚಾರಣೆಗೆ ಸುಜಾತ ಭಟ್ ತಬ್ಬಿಬಾಗಿದ್ದು ಸತ್ಯವನ್ನು ಬಾಯಿಬಿಟ್ಟಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಎಸ್ಐಟಿ ವಿಚಾರಣೆಗೆ ಒಳಪಟ್ಟಿದ ಸುಜಾತ ಭಟ್ ಅವರಿಗೆ ಇದೀಗ ಬಿಗ್ ರಿಲೀಫ್ ಸಿಕ್ಕಿದೆ. ಸುಜಾತ ಭಟ್ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ಅಧಿಕಾರಿಗಳು ವಿಚಾರಣೆಗೆ ಕರೆದಾಗ ಬರುವಂತೆ ಸೂಚನೆ ನೀಡಿ ಕಳುಹಿಸಿದ್ದಾರೆ ಹಾಗಾಗಿ ಸುಜಾತ ಭಟ್ ಈ ಒಂದು ಪ್ರಕರಣದಿಂದ ನಿಟ್ಟುಸಿರು ಬಿಟ್ಟಿದ್ದಾರೆ.
ಮೊದಲಿಗೆ ಅನನ್ಯ ಭಟ್ ನನ್ನ ಮಗಳು ಎಂದು ಹೇಳಿ ದೂರು ನೀಡಿದ್ದರು. ಇದೇ ಪ್ರಕರಣದ ಕುರಿತು ಎಸ್ಐಟಿ ಅಧಿಕಾರಿಗಳು ತೀವ್ರ ವಿಚಾರಣೆ ಒಳಪಡಿಸಿದಾಗ ಸುಜಾತ ಭಟ್ ನನಗೇನು ತಪ್ಪಿಲ್ಲ ಕೆಲವರು ಹೇಳಿದಂತೆ ನಾನು ಕೇಳಿದ್ದೇನೆ ನನ್ನನ್ನು ಬಿಟ್ಟುಬಿಡಿ ಎಂದು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದರು. ಇದೀಗ ಈ ಒಂದು ಪ್ರಕರಣದಿಂದ ಸುಜಾತಾ ಭಟ್ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.