Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೆಇಎ ಪರೀಕ್ಷಾ ವ್ಯವಸ್ಥೆ ಅಧ್ಯಯನಕ್ಕೆ ಬಂದ ಕೇಂದ್ರ ಸರ್ಕಾರದ ನಿಯೋಗ

11/03/2026 3:31 PM

BREAKING : ಶೈಕ್ಷಣಿಕ ಕೆಲಸಗಳಿಂದ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಪಠ್ಯಪುಸ್ತಕ ಲೇಖಕರ ನಿಷೇಧಕ್ಕೆ ಸುಪ್ರೀಂಕೋರ್ಟ್ ಸೂಚನೆ

11/03/2026 3:30 PM

BREAKING: ಕರ್ನಾಟಕ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಲಿಂಗರಾಜ್ ಪಾಟೀಲ್ ರಾಜೀನಾಮೆ

11/03/2026 3:21 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗೂಗಲ್, ಮೆಟಾದ ಸಹಭಾಗಿತ್ವದಲ್ಲಿ ಮುಕೇಶ್ ಅಂಬಾನಿಯಿಂದ ರಿಲಯನ್ಸ್ ಇಂಟೆಲಿಜೆನ್ಸ್ ಎಐ ಘಟಕ ಅನಾವರಣ
INDIA

ಗೂಗಲ್, ಮೆಟಾದ ಸಹಭಾಗಿತ್ವದಲ್ಲಿ ಮುಕೇಶ್ ಅಂಬಾನಿಯಿಂದ ರಿಲಯನ್ಸ್ ಇಂಟೆಲಿಜೆನ್ಸ್ ಎಐ ಘಟಕ ಅನಾವರಣ

By kannadanewsnow0929/08/2025 6:00 PM

ಮುಂಬೈ : ಭಾರತದಲ್ಲಿ ಕೃತಕ ಬುದ್ಧಿಮತ್ತೆ ಕ್ಷೇತ್ರಕ್ಕೆ ಚಾಲನೆಯನ್ನು ನೀಡುವುದಕ್ಕೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಪೂರ್ಣ ಸ್ವಾಮ್ಯದ ಹೊಸ ಘಟಕವಾದ ರಿಲಯನ್ಸ್ ಇಂಟೆಲಿಜೆನ್ಸ್ ಅನ್ನು ಶುಕ್ರವಾರ ಅನಾವರಣಗೊಳಿಸಲಾಗಿದೆ. ಇದು ಟೆಲಿಕಾಂ, ರೀಟೇಲ್ ವ್ಯಾಪಾರ ಮತ್ತು ಇಂಧನ ವ್ಯವಹಾರಗಳ ಜೊತೆಗೆ ಉದ್ಯಮ ಸಮೂಹವನ್ನು “ಡೀಪ್-ಟೆಕ್ ಉದ್ಯಮ” ವನ್ನಾಗಿ ಮಾಡುವ ಮುಕೇಶ್ ಅಂಬಾನಿ ಅವರ ಮಹತ್ವಾಕಾಂಕ್ಷೆಗೆ ಇದು ಪುಷ್ಟಿಯನ್ನು ನೀಡುತ್ತದೆ.

ಕಂಪನಿಯು ತನ್ನ ನಾಲ್ಕು ಧ್ಯೇಯಗಳನ್ನು ಅನುಷ್ಠಾನಕ್ಕೆ ತರಲಿದೆ: ಜಾಮ್‌ನಗರದಲ್ಲಿ ಗಿಗಾವ್ಯಾಟ್-ಪ್ರಮಾಣದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್-ಸಿದ್ಧ ಡೇಟಾ ಕೇಂದ್ರಗಳ ಸ್ಥಾಪನೆ, ಪ್ರಮುಖ ತಂತ್ರಜ್ಞಾನ ಸಂಸ್ಥೆಗಳು ಮತ್ತು ಮುಕ್ತ-ಮೂಲ (ಓಪನ್ ಸೋರ್ಸ್) ಸಮುದಾಯಗಳೊಂದಿಗೆ ಸಹಯೋಗ ಮಾಡಿಕೊಳ್ಳುವುದು, ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಸಣ್ಣ ವ್ಯಾಪಾರ ಕ್ಷೇತ್ರಗಳಲ್ಲಿ ಎಐ ಸೇವೆಗಳನ್ನು ತರುವುದು ಮತ್ತು ವಿಶ್ವ ದರ್ಜೆಯ ಎಐ ಪ್ರತಿಭೆಗಳನ್ನು ಭಾರತಕ್ಕೆ ಆಕರ್ಷಿಸುವುದು.

ಇದನ್ನು ಸಾಕಾರ ಮಾಡುವುದಕ್ಕಾಗಿ ರಿಲಯನ್ಸ್ ಸಿಲಿಕಾನ್ ವ್ಯಾಲಿಯತ್ತ ಮುಖ ಮಾಡುತ್ತಿದೆ. ಸುಂದರ್ ಪಿಚೈ ನೇತೃತ್ವದ ಗೂಗಲ್‌ನೊಂದಿಗೆ “ಗಹನವಾದ, ಸಮಗ್ರ ಪಾಲುದಾರಿಕೆ”ಯನ್ನು ಅಂಬಾನಿ ಘೋಷಿಸಿದರು. “ಭಾರತದಲ್ಲಿ ಎಐ ಅವಕಾಶ ಅಗಾಧವಾಗಿದೆ. ಇದು ದೊಡ್ಡ ಉದ್ಯಮಗಳಿಂದ ಹಿಡಿದು ಚಿಕ್ಕ ದಿನಸಿ ಅಂಗಡಿಯವರೆಗೆ ಪ್ರತಿ ಉದ್ಯಮ ಮತ್ತು ಸಂಸ್ಥೆಯನ್ನು ಪರಿವರ್ತಿಸುತ್ತದೆ. ಇಂಧನ ಮತ್ತು ರೀಟೇಲ್ ವ್ಯಾಪಾರದಿಂದ ಟೆಲಿಕಾಂ ಮತ್ತು ಹಣಕಾಸು ಸೇವೆಗಳವರೆಗೆ ಎಐ ಬಳಸಿಕೊಂಡು ರಿಲಯನ್ಸ್‌ನ ಎಲ್ಲ ವ್ಯವಹಾರಗಳು ರೂಪಾಂತರಗೊಳ್ಳಲು ಸಹಾಯ ಮಾಡಲು ಗೂಗಲ್ ಮತ್ತು ರಿಲಯನ್ಸ್ ಪಾಲುದಾರಿಕೆ ಹೊಂದಿವೆ. ಈ ಎಐ ಅಳವಡಿಕೆ ಬೆಂಬಲಿಸಲು, ನಾವು ಒಟ್ಟಾಗಿ ರಿಲಯನ್ಸ್‌ಗಾಗಿ ನಿರ್ಮಿಸಲಾದ ಮತ್ತು ಸಮರ್ಪಿತವಾದ ಜಾಮ್‌ನಗರ ಕ್ಲೌಡ್ ಪ್ರದೇಶವನ್ನು ಸ್ಥಾಪಿಸುತ್ತಿದ್ದೇವೆ,” ಎಂದು ಪಿಚೈ ಹೇಳಿದರು.

ಭಾರತೀಯ ವ್ಯವಹಾರೋದ್ಯಮಗಳು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಅನುಗುಣವಾಗಿ ಸವರನ್ (ಸಾರ್ವಭೌಮತೆಯ), ಉದ್ಯಮ-ಸಿದ್ಧ ಎಐ ಪ್ಲಾಟ್‌ಫಾರ್ಮ್‌ಗಳನ್ನು ಒದಗಿಸಲು ಮೆಟಾ ಜೊತೆ ಸಮರ್ಪಿತ ಜಂಟಿ ಉದ್ಯಮವನ್ನು ರಿಲಯನ್ಸ್ ರೂಪಿಸುತ್ತಿದೆ. ಈ ಪಾಲುದಾರಿಕೆಯು ಮೆಟಾದ ಓಪನ್-ಸೋರ್ಸ್ ಲಾಮಾ ಮಾದರಿಗಳನ್ನು ಇಂಧನ, ಟೆಲಿಕಾಂ, ರೀಟೇಲ್ ವ್ಯಾಪಾರ ಮತ್ತು ಉತ್ಪಾದನೆಯಲ್ಲಿ ರಿಲಯನ್ಸ್‌ನ ವ್ಯಾಪ್ತಿಯೊಂದಿಗೆ ಸಂಯೋಜಿಸುತ್ತದೆ. “ಭಾರತದಲ್ಲಿರುವ ಪ್ರತಿಯೊಬ್ಬರೂ ಎಐಗೆ ಸಂಪರ್ಕವನ್ನು ಹೊಂದಿದ್ದಾರೆ – ಮತ್ತು ಅಂತಿಮವಾಗಿ ಸೂಪರ್ ಇಂಟೆಲಿಜೆನ್ಸ್ ಅನ್ನು ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ನಾವು ಒಟ್ಟಾಗಿ ಬಯಸುತ್ತೇವೆ,” ಎಂದು ಮೆಟಾ ಸಿಇಒ ಮಾರ್ಕ್ ಝುಕರ್‌ಬರ್ಗ್ ಹೇಳಿದರು. ಒಂದು ದೇಶವಾಗಿ ಓಪನ್-ಸೋರ್ಸ್ ಎಐ ಹೇಗೆ ಸುರಕ್ಷಿತವಾಗಿ ವ್ಯಾಪಕ ಬಳಕೆ ಮಾಡಬಹುದು ಎಂಬುದಕ್ಕೆ ಈ ಉದ್ಯಮವು ಒಂದು ಮಾದರಿ ಎಂದು ಅವರು ಹೇಳಿದರು.

ರಿಲಯನ್ಸ್ ತನ್ನ ಸಾಂಪ್ರದಾಯಿಕ ತೈಲದಿಂದ ರಾಸಾಯನಿಕ ತನಕದ ವ್ಯವಹಾರದ ಬೇರುಗಳನ್ನು ಡಿಜಿಟಲ್ ಸೇವೆಗಳು ಮತ್ತು ಶುದ್ಧ ಇಂಧನದ ಕಡೆಗೆ ತೆಗೆದುಕೊಂಡು ಹೋಗುತ್ತಿರುವುದರಿಂದ ಈ ಅನಾವರಣ ಆಗಿದೆ. ಕಳೆದ ಆರು ವರ್ಷಗಳಲ್ಲಿ ಇದು ಜಿಯೋವನ್ನು ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿ ರೂಪಿಸಿದೆ, ರಿಲಯನ್ಸ್ ರೀಟೇಲ್ ಅನ್ನು ಮಾರುಕಟ್ಟೆ ಬಂಡವಾಳದ ಮೂಲಕ ಅಗ್ರ ಜಾಗತಿಕ ರೀಟೇಲ್ ವ್ಯಾಪಾರಿಯಾಗಿ ಪರಿವರ್ತಿಸಿದೆ ಮತ್ತು ಹಸಿರು ಇಂಧನ ಗಿಗಾ-ಕಾರ್ಖಾನೆಗಳಿಗೆ ನೂರಾರು ಕೋಟಿ ಹಣವನ್ನು ಮೀಸಲಿಟ್ಟಿದೆ. ರಿಲಯನ್ಸ್ ಇಂಟೆಲಿಜೆನ್ಸ್‌ನೊಂದಿಗೆ ಎಐ ಮುಂದಿನ ಪರಿವರ್ತನಾ ಬೆಳವಣಿಗೆಯ ಎಂಜಿನ್ ಆಗಿರುತ್ತದೆ ಎಂದು ಅಂಬಾನಿ ಹೂಡಿಕೆ ಮಾಡುತ್ತಿದ್ದಾರೆ – ಇದು ರಿಲಯನ್ಸ್‌ನ ವ್ಯವಹಾರಗಳಿಗೆ ಶಕ್ತಿ ತುಂಬುವುದಷ್ಟೇ ಅಲ್ಲದೆ, ಭಾರತದ ಆರ್ಥಿಕ ಪಥವನ್ನು ರೂಪಿಸುತ್ತದೆ.

ಹುಬ್ಬಳ್ಳಿ–ರಕ್ಸೌಲ್, ಹುಬ್ಬಳ್ಳಿ–ಭಗತ್-ಕಿ-ಕೋಠಿ ನಡುವೆ ವಿಶೇಷ ರೈಲುಗಳ ಸಂಚಾರ

BREAKING: UGCET, NEET 2ನೇ ಸುತ್ತಿನ ತಾತ್ಕಾಲಿಕ ಫಲಿತಾಂಶ ಪ್ರಕಟ- ಕೆಇಎ

Share. Facebook Twitter LinkedIn WhatsApp Email

Related Posts

BREAKING : ಶೈಕ್ಷಣಿಕ ಕೆಲಸಗಳಿಂದ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಪಠ್ಯಪುಸ್ತಕ ಲೇಖಕರ ನಿಷೇಧಕ್ಕೆ ಸುಪ್ರೀಂಕೋರ್ಟ್ ಸೂಚನೆ

11/03/2026 3:30 PM1 Min Read

‘2027ರ ಜನಗಣತಿ 2 ಹಂತಗಳಲ್ಲಿ ನಡೆಸಲಾಗುವುದು, ಹಂತ-1ರ ಪ್ರಶ್ನೆಗಳನ್ನ ತಿಳಿಸಲಾಗಿದೆ’ : ಗೃಹ ಸಚಿವಾಲಯ

11/03/2026 3:05 PM1 Min Read

BREAKING : ಇರಾನ್ ನೂತನ ಸುಪ್ರೀಂ ನಾಯಕ ‘ಮೊಜ್ತಬಾ ಖಮೇನಿ’ ಯುದ್ಧದಲ್ಲಿ ಗಾಯಗೊಂಡಿದ್ರೂ ಸುರಕ್ಷಿತ!

11/03/2026 2:55 PM1 Min Read
Recent News

ಕೆಇಎ ಪರೀಕ್ಷಾ ವ್ಯವಸ್ಥೆ ಅಧ್ಯಯನಕ್ಕೆ ಬಂದ ಕೇಂದ್ರ ಸರ್ಕಾರದ ನಿಯೋಗ

11/03/2026 3:31 PM

BREAKING : ಶೈಕ್ಷಣಿಕ ಕೆಲಸಗಳಿಂದ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಪಠ್ಯಪುಸ್ತಕ ಲೇಖಕರ ನಿಷೇಧಕ್ಕೆ ಸುಪ್ರೀಂಕೋರ್ಟ್ ಸೂಚನೆ

11/03/2026 3:30 PM

BREAKING: ಕರ್ನಾಟಕ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಲಿಂಗರಾಜ್ ಪಾಟೀಲ್ ರಾಜೀನಾಮೆ

11/03/2026 3:21 PM

ಗ್ರಾಹಕರಿಗೆ ಸಿಲಿಂಡರ್ ನೀಡಲ್ಲ ಎನ್ನುವ ವಿತರಕರ ವಿರುದ್ಧ ಕ್ರಮ : ಸಚಿವ ಕೆ.ಎಚ್ ಮುನಿಯಪ್ಪ ಎಚ್ಚರಿಕೆ!

11/03/2026 3:21 PM
State News
KARNATAKA

ಕೆಇಎ ಪರೀಕ್ಷಾ ವ್ಯವಸ್ಥೆ ಅಧ್ಯಯನಕ್ಕೆ ಬಂದ ಕೇಂದ್ರ ಸರ್ಕಾರದ ನಿಯೋಗ

By kannadanewsnow0911/03/2026 3:31 PM KARNATAKA 1 Min Read

ಬೆಂಗಳೂರು: ವೆಬ್ ಕಾಸ್ಟಿಂಗ್ ಹಾಗೂ ಮುಖ ಚಹರೆ ಪತ್ತೆ ತಂತ್ರಜ್ಞಾನ ಬಳಸಿಕೊಂಡು ಅತ್ಯಂತ ಪಾರದರ್ಶಕವಾಗಿ ವಿವಿಧ ಪರೀಕ್ಷೆಗಳನ್ನು ನಡೆಸುತ್ತಿರುವ ಕರ್ನಾಟಕ ಪರೀಕ್ಷಾ…

BREAKING: ಕರ್ನಾಟಕ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಲಿಂಗರಾಜ್ ಪಾಟೀಲ್ ರಾಜೀನಾಮೆ

11/03/2026 3:21 PM

ಗ್ರಾಹಕರಿಗೆ ಸಿಲಿಂಡರ್ ನೀಡಲ್ಲ ಎನ್ನುವ ವಿತರಕರ ವಿರುದ್ಧ ಕ್ರಮ : ಸಚಿವ ಕೆ.ಎಚ್ ಮುನಿಯಪ್ಪ ಎಚ್ಚರಿಕೆ!

11/03/2026 3:21 PM

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭರ್ಜರಿ ಬೇಟೆ: 1.57 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿ

11/03/2026 3:16 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.