Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರೈಲಿನಲ್ಲಿ ಖಾಲಿ ಸೀಟು ಹುಡುಕಲು ಟಿಟಿಇ ಬೆನ್ನ ಹಿಂದೆ ಅಲೆಯುವ ಅಗತ್ಯವಿಲ್ಲ! ಐಆರ್‌ಸಿಟಿಯ ಈ ಫೀಚರ್ ಮೂಲಕ ನೀವೇ ಪತ್ತೆಹಚ್ಚಿ!

ರಾಜ್ಯದಿಂದ ರಾಷ್ಟ್ರೀಯ ಗ್ರಿಡ್‌ಗೆ ₹423 ಕೋಟಿ ವಿದ್ಯುತ್ ಮಾರಾಟದ ಸಾಧನೆ: ಇಂಧನ ಸಚಿವ ಕೆ.ಜೆ.ಜಾರ್ಜ್

​ಬೇಸಿಗೆಯ ಬಿಸಿಲು ನಿಮ್ಮನ್ನು ಹೆಚ್ಚು ಕೋಪಿಷ್ಠರನ್ನಾಗಿಸುತ್ತಿದೆಯೇ? ತಾಪಮಾನ ಏರಿಕೆ ಮತ್ತು ಮಾನಸಿಕ ಒತ್ತಡದ ನಡುವಿನ ಸಂಬಂಧ ಇಲ್ಲಿದೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕೆ.ಜಿ.ಎಫ್ ನಲ್ಲಿ ನೂತನ ಪ್ರಾದೇಶಿಕ ಸಾರಿಗೆ ಕಛೇರಿ, ಸ್ವಯಂ ಚಾಲಿತ ಚಾಲನಾ ಪಥ ಉದ್ಘಾಟನೆ
KARNATAKA

ಕೆ.ಜಿ.ಎಫ್ ನಲ್ಲಿ ನೂತನ ಪ್ರಾದೇಶಿಕ ಸಾರಿಗೆ ಕಛೇರಿ, ಸ್ವಯಂ ಚಾಲಿತ ಚಾಲನಾ ಪಥ ಉದ್ಘಾಟನೆ

By kannadanewsnow57

ಕೆ.ಜಿ.ಎಫ್ : ರೂ.5 ಕೋಟಿಗಳ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಪ್ರಾದೇಶಿಕ ಸಾರಿಗೆ ಕಛೇರಿ ಮತ್ತು ರೂ.5 ಕೋಟಿಗಳ‌ ವೆಚ್ಚದಲ್ಲಿ ನಿರ್ಮಿಸಿರುವ ಸ್ವಯಂ ಚಾಲಿತ ಚಾಲಾನಾ ಪಥವನ್ನು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಉದ್ಘಾಟಿಸಿದ್ದಾರೆ.

ಸಾರಿಗೆ ಇಲಾಖೆಯು( RTO) ರಾಜ್ಯದಲ್ಲಿ 7 ಸ್ವಂತ ಕಛೇರಿ ಕಟ್ಟಡವನ್ನು ವೆಚ್ಚ ರೂ. 45.74 ಕೋಟಿಗಳಲ್ಲಿ‌ ಹೊಂದಿದೆ. ಕಛೇರಿಗಳು ನಿರ್ಮಾಣ ವೆಚ್ಚ ರೂ. 70.00 ಕೋಟಿಗಳು ಕಾಮಗಾರಿ ಪ್ರಗತಿಯಲ್ಲಿದೆ. ಮಧುಗಿರಿ ಮತ್ತು ಹೊನ್ನಾವರ ಕಛೇರಿ ಕಟ್ಟಡಗಳ ಕಾಮಗಾರಿಗಳನ್ನು ಒಟ್ಟು ರೂ.10.05 ಕೋಟಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದ್ದು. ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು ಎಂದು ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.

ಸ್ವಯಂ ಚಾಲಿತ ಪರೀಕ್ಷಾ ಪಥಗಳ ನಿರ್ಮಾಣ ಕಾಮಗಾರಿ, 9 ಡ್ರೈವಿಂಗ್ ಟ್ರ್ಯಾಕ್ ವೆಚ್ಚ ರೂ.44.21 ಕೋಟೆಗಳು ನಿರ್ಮಿಸಲಾಗಿದೆ. 28 ಡ್ರೈವಿಂಗ್ ಟ್ರ್ಯಾಕ್ ಕಾಮಗಾರಿ ಪ್ರಗತಿಯಲ್ಲಿದ್ದು, ಒಟ್ಟು ವೆಚ್ಚ ರೂ.203 ಕೋಟಿಗಳು. ಹೊನ್ನಾವರ, ಚಾಮರಾಜನಗರ ಮತ್ತು ಚಿತ್ರದುರ್ಗ ಗಳಲ್ಲಿ ರೂ.21 ಕೋಟಿಗಳ ವೆಚ್ಚದಲ್ಲಿ ಡ್ರೈವಿಂಗ್ ಟ್ರ್ಯಾಕ್ ನಿರ್ಮಾಣ ಕೈಗೊಳ್ಳಲು ಉದ್ದೇಶಿಸಿದೆ.
ರಾಜ್ಯದಲ್ಲಿ ಜಿಲ್ಲೆಗೆ ಒಂದರಂತೆ ಪಿ.ಪಿ.ಪಿ. ಅಡಿ 32 ಸ್ಥಳಗಳಲ್ಲಿ ಸ್ವಯಂ ಚಾಲಿತ ವಾಹನ ಪರೀಕ್ಷಾ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ.
ಭಾರಿ ವಾಹನ ಚಾಲಕರ ತರಬೇತಿ ಕೇಂದ್ರಗಳು, ರಾಜ್ಯದಲ್ಲಿ ಗುಣಮಟ್ಟದ ಚಾಲಕರನ್ನು ತರಬೇತಿಗೊಳಿಸುವ ನಿಟ್ಟಿನಲ್ಲಿ ಭಾರಿ ವಾಹನ ಚಾಲಕರ 4 ತರಬೇತಿ ಕೇಂದ್ರಗಳನ್ನು ರೂ. 60.76 ಕೋಟಿಗಳಲ್ಲಿ ಸ್ಥಾಪಿಸಲಾಗಿದೆ. 1 ತರಬೇತಿ ಕೇಂದ್ರ ಕಾಮಗಾರಿ ಪ್ರಗತಿಯಲ್ಲಿದ್ದು, ಅದರ ವೆಚ್ಚ 6.50 ಕೋಟಿ ಗಳಾಗಿದೆ. ಇದರೊಂದಿಗೆ, ವಿಜಯಪುರ, ಬಳ್ಳಾರಿ ಮತ್ತು ನಾಗಮಂಗಲ ಗಳಲ್ಲಿ ಭಾರಿ ವಾಹನ ಚಾಲಕರ ತರಬೇತಿ ಕೇಂದ್ರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
ಈ‌ ಕಾರ್ಯಕ್ರಮದಲ್ಲಿ ಶ್ರೀ‌ ಕೆ.ಎಚ್.ಮುನಿಯಪ್ಪ, ಮಾನ್ಯ ಆಹಾರ,ನಾಗರೀಕ‌ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು, ಶ್ರೀಮತಿ ರೂಪಾ ಶಶಿಧರ್,ಮಾನ್ಯ ಶಾಸಕರು, ಶ್ರೀ‌ ನಾರಾಯಣಸ್ವಾಮಿ, ಮಾನ್ಯ ಶಾಸಕರು,ಶ್ರೀ. ನಾರಾಯಣ ಸ್ವಾಮಿ‌ ಮಾನ್ಯ ಮಾಜಿ‌‌ ಶಾಸಕರು, ಸಾರಿಗೆ ಆಯುಕ್ತರು, ವ್ಯವಸ್ಥಾಪಕ ‌ನಿರ್ದೇಶಕರು ಉಪಸ್ಥಿತರಿದ್ದರು.

New Regional Transport Office self-driving driving lane inaugurated in KGF
Share. Facebook Twitter LinkedIn WhatsApp Email

Related Posts

ರಾಜ್ಯದಿಂದ ರಾಷ್ಟ್ರೀಯ ಗ್ರಿಡ್‌ಗೆ ₹423 ಕೋಟಿ ವಿದ್ಯುತ್ ಮಾರಾಟದ ಸಾಧನೆ: ಇಂಧನ ಸಚಿವ ಕೆ.ಜೆ.ಜಾರ್ಜ್

2 Mins Read

ಜನರ ಪ್ರೀತಿ, ವಿಶ್ವಾಸಕ್ಕೆ ಎಂದಿಗೂ ಚಿರಋಣಿ: ಮದ್ದೂರು ಶಾಸಕ ಕೆ.ಎಂ.ಉದಯ್

2 Mins Read

BIG NEWS: ಮೇಲುಕೋಟೆ ಯೋಗನರಸಿಂಹಸ್ವಾಮಿ ದೇವಸ್ಥಾನದ ಖಜಾನೆಗೆ ಕನ್ನ: ಅರ್ಚಕರು, ಸಿಬ್ಬಂದಿ ವಿರುದ್ಧ ದೂರು!

2 Mins Read
Recent News

ರೈಲಿನಲ್ಲಿ ಖಾಲಿ ಸೀಟು ಹುಡುಕಲು ಟಿಟಿಇ ಬೆನ್ನ ಹಿಂದೆ ಅಲೆಯುವ ಅಗತ್ಯವಿಲ್ಲ! ಐಆರ್‌ಸಿಟಿಯ ಈ ಫೀಚರ್ ಮೂಲಕ ನೀವೇ ಪತ್ತೆಹಚ್ಚಿ!

ರಾಜ್ಯದಿಂದ ರಾಷ್ಟ್ರೀಯ ಗ್ರಿಡ್‌ಗೆ ₹423 ಕೋಟಿ ವಿದ್ಯುತ್ ಮಾರಾಟದ ಸಾಧನೆ: ಇಂಧನ ಸಚಿವ ಕೆ.ಜೆ.ಜಾರ್ಜ್

​ಬೇಸಿಗೆಯ ಬಿಸಿಲು ನಿಮ್ಮನ್ನು ಹೆಚ್ಚು ಕೋಪಿಷ್ಠರನ್ನಾಗಿಸುತ್ತಿದೆಯೇ? ತಾಪಮಾನ ಏರಿಕೆ ಮತ್ತು ಮಾನಸಿಕ ಒತ್ತಡದ ನಡುವಿನ ಸಂಬಂಧ ಇಲ್ಲಿದೆ!

​ಏರ್ ಇಂಡಿಯಾ ವಿಮಾನ ದುರಂತ: ಸಂತ್ರಸ್ತ ಕುಟುಂಬಗಳ ಮೇಲೆ ಅಂತಿಮ ಪರಿಹಾರಕ್ಕಾಗಿ ಯಾವುದೇ ಒತ್ತಡವಿಲ್ಲ; ಏರ್ ಇಂಡಿಯಾ ಸ್ಪಷ್ಟನೆ

State News
KARNATAKA

ರಾಜ್ಯದಿಂದ ರಾಷ್ಟ್ರೀಯ ಗ್ರಿಡ್‌ಗೆ ₹423 ಕೋಟಿ ವಿದ್ಯುತ್ ಮಾರಾಟದ ಸಾಧನೆ: ಇಂಧನ ಸಚಿವ ಕೆ.ಜೆ.ಜಾರ್ಜ್

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಪವರ್‌ ಕಂಪನಿ ಆಫ್‌ ಕರ್ನಾಟಕ ಲಿಮಿಟೆಡ್ ಮೂಲಕ ರಾಜ್ಯವು ಕಳೆದ ಎರಡೂವರೆ ತಿಂಗಳಲ್ಲಿ ಪ್ರತಿ ಯೂನಿಟ್‌ಗೆ 9.08 ರೂಪಾಯಿಯಂತೆ…

ಜನರ ಪ್ರೀತಿ, ವಿಶ್ವಾಸಕ್ಕೆ ಎಂದಿಗೂ ಚಿರಋಣಿ: ಮದ್ದೂರು ಶಾಸಕ ಕೆ.ಎಂ.ಉದಯ್

BIG NEWS: ಮೇಲುಕೋಟೆ ಯೋಗನರಸಿಂಹಸ್ವಾಮಿ ದೇವಸ್ಥಾನದ ಖಜಾನೆಗೆ ಕನ್ನ: ಅರ್ಚಕರು, ಸಿಬ್ಬಂದಿ ವಿರುದ್ಧ ದೂರು!

ಮಕ್ಕಳ ಪೋಷಕರ ಗಮನಕ್ಕೆ: ಜೂನ್.28ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ, ತಪ್ಪದೇ ಹಾಕಿಸಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.