ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಎಸ್ ಐಟೆ ಅಧಿಕಾರಿಗಳು ಇದೀಗ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ತೀವ್ರ ವಿಚಾರಣೆಯ ಒಳಪಡಿಸಿದ್ದು ಎಸ್ಐಟಿ ಮುಂದೆ ಇದೀಗ ಚಿನ್ನಯ ಮತ್ತೊಂದು ಸ್ಪೋಟಕ ಹೇಳಿಕೆ ನೀಡಿದ್ದು ಸುಮಾರು 4, ವರೆಗೂ ಹಣ ನೀಡಿ ಸುಳ್ಳು ಹೇಳುವಂತೆ ಬೆದರಿಕೆ ಹಾಕಿದ್ದಾರೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾನೆ.
ಚಿನ್ನಯನಿಗೆ ಬುರುಡೆ ಗ್ಯಾಂಗ್ ಬಿದರಿಕೆ ಹಾಕಿತ್ತು. ಚೆನ್ನಯ್ಯನಿಗೂ ಸೂತ್ರದಾರಿಗಳು ಬಿದರಿಕೆ ಹಾಕಿದ್ದರು ಹಣ ನೀಡಿ ಹೀಗೆ ಹೇಳಬೇಕು ಅಂತ ಬೆದರಿಕೆ ಹಾಕಿದ್ದರು ಅಂತ ಎಸ್ಐಟಿ ಮುಂದೆ ಹೇಳಿಕೆ ನೀಡಿದ್ದಾನೆ ಮುಂದೆ ಚಿನ್ನಯ ಈ ಒಂದು ಹೇಳಿಕೆ ನೀಡಿದ್ದು ನನಗೆ ಹೀಗೆ ಹೇಳಿಕೆ ನೀಡಬೇಕು ಎಂದು ಹೇಳಿ ಕೊಟ್ಟರು. ನಾನು ದೂರವಾಗಲು ಬಯಸಿದಾಗ ನನಗೆ ಹೆದರಿಕೆ ಹಾಕಿದರು ಸಹಾಯ ಮಾಡುವ ರೀತಿಯಲ್ಲಿ ಹಣ ಕೊಟ್ಟಿದ್ದಾರೆ, ಐದು ಹತ್ತು ಸಾವಿರ ಹಂತ ಹಂತವಾಗಿ ಹಣ ನೀಡಿದರು. ಮೂರುವರೆಯಿಂದ ನಾಲ್ಕು ಲಕ್ಷದ ತನಕ ಹಣ ನೀಡಿದರು ಎಂದು ಹೇಳಿಕೆ ನೀಡಿದ್ದಾನೆ.
ಚಿನ್ನಯನಿಗೆ ಗ್ಯಾಂಗ್ ಜೀವ ಬೆದರಿಕೆ ಹಾಗೆ ಸುಳ್ಳು ಹೇಳಿಸಿತ್ತು. ಸಹವಾಸ ಬೇಡವೆಂದು ಹೊರಟಿದ್ದ ಚೆನ್ನಯ್ಯನಿಗೆ ಈ ಒಂದು ಗ್ಯಾಂಗ್ ಬೆದರಿಕೆ ಹಾಕಿತ್ತು. ಕೊನೆಯ ಹಂತದಲ್ಲಿ ನಾನು ಇವರಿಂದ ದೂರವಾಗುವುದಕ್ಕೆ ಬಯಸಿದ್ದೆ ನಿನ್ನ ಬಿಡುವುದಿಲ್ಲ ಹೊಡೆದು ಮುಗಿಸುತ್ತಾರೆ ಎಂದು ಈ ಒಂದು ಗ್ಯಾಂಗ್ ಬೆದರಿಕೆ ಹಾಕಿತ್ತು. ನಿನಗೆ ಎಲ್ಲಾ ಗೊತ್ತಿದೆ ಎಂದು ಬೆದರಿಕೆ ಹಾಕಿದ್ರು ನಾವು ಹೇಳಿದ ಹಾಗೆ ಕೇಳಿಲ್ಲ ಅಂದರೆ ಕೇಸ್ ಹಾಕುತ್ತೇವೆ. ನಿನ್ನ ವಿರುದ್ಧವೇ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದ್ರು ನಿನಗೆ ಜೀವಾವಧಿ ಶಿಕ್ಷೆ ಆಗುತ್ತದೆ ಎಂದು ನನ್ನನ್ನು ಹೆದರಿಸಿದರು ಎಂದು ಸ್ಪೋಟಕ ಹೇಳಿಕೆ ನೀಡಿದ್ದಾನೆ.