ಶಿವಮೊಗ್ಗ: ಸಾಗರ ತಾಲ್ಲೂಕಿನ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ಖಾಲಿ ಇದ್ದಂತ 9 ಆಸ್ಪತ್ರೆಗಳಿಗೆ ಒಂದು ವರ್ಷ ಗ್ರಾಮೀಣ ಸೇವೆಯಡಿ ಎಂಬಿಬಿಎಸ್ ವೈದ್ಯರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಆರೋಗ್ಯಾಧಿಕಾರಿ ಆದೇಶದ ಮಾಡಿದ್ದು, ತಾಲ್ಲೂಕಿನಲ್ಲಿ ಒಂದು ವರ್ಷ ಗ್ರಾಮೀಣ ಸೇವೆ ವೈದ್ಯರು ಕೌನ್ಸೆಲಿಂಗ್ ಮುಖಾಂತರ ಸ್ಥಳ ಆಯ್ಕೆ ಮಾಡಿಕೊಂಡಿದ್ದಾರೆ. ತಾಲ್ಲೂಕಿನ ವಿವಿಧ ಆರೋಗ್ಯ ಸಂಸ್ಥೆಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುತ್ತಾರೆ ಎಂದಿದ್ದಾರೆ.
ಸಾಗರ ತಾಲ್ಲೂಕಿನ ಯಾವ ಆಸ್ಪತ್ರೆಗೆ ಯಾವ ವೈದ್ಯರ ನೇಮಕ? ಇಲ್ಲಿದೆ ಲೀಸ್ಟ್
- ಡಾ.ನಿತಿನ್ ದೀಪ್, ನಗರ ಆರೋಗ್ಯ ಕೇಂದ್ರ ಸುಭಾಷ್ ನಗರ, ಸಾಗರ
- ಡಾ.ಮಧುರ, ನಮ್ಮ ಕ್ಲಿನಿಕ್, ನೆಹರು ನಗರ, ಸಾಗರ
- ಡಾ.ಎಂ.ಡಿ ಹನೀಫ್, ಸಮುದಾಯ ಆರೋಗ್ಯ ಕೇಂದ್ರ, ಆನಂದಪುರ
- ಡಾ.ರೀಟಾ ಗ್ಲೋರಿ ಕೆ.ವಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಕಾರ್ಗಲ್
- ಡಾ.ಪ್ರಸನ್ನ ಕುಮಾರ್, ಪ್ರಾಥಮಿಕ ಆರೋಗ್ಯ ಕೇಂದ್ರ, ಬ್ಯಾಕೋಡು
- ಡಾ.ಅಮಿತಾ ಮಡಿವಾಳರ, ಪ್ರಾಥಮಿಕ ಆರೋಗ್ಯ ಕೇಂದ್ರ, ಶಿರವಂತೆ
- ಡಾ.ವಿನಿತ್.ಬಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಲಿಂಗದಹಳ್ಳಿ
- ಡಾ.ರವಿಕುಮಾರ್, ಪ್ರಾಥಮಿಕ ಆರೋಗ್ಯ ಕೇಂದ್ರ, ತಡಗಳಲೆ
- ಡಾ.ಅನಿಕೇತ್, ಪ್ರಾಥಮಿಕ ಆರೋಗ್ಯ ಕೇಂದ್ರ, ತಾಳಗುಪ್ಪ
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BIG NEWS: ಆತ್ಮಹತ್ಯೆಗೆ ಮುಂದಾದ ವ್ಯಕ್ತಿ ಬದುಕಿಸಿದ ಕಾರ್ಗಲ್ ಠಾಣೆ PSI ನಾಗರಾಜ್: ಹೇಗೆ ಗೊತ್ತಾ?