ದಕ್ಷಿಣಕನ್ನಡ : ಅನನ್ಯ ಭಟ್ ಧರ್ಮಸ್ಥಳಕ್ಕೆ ತೆರಳಿದ್ದಾಗ ನಾಪತ್ತೆ ದೂರು ವಿಚಾರವಾಗಿ ಇದೀಗ ದೂರುದಾರೆ ಸುಜಾತಾ ಭಟ್ ಅವರನ್ನು SIT ಅಧಿಕಾರಿಗಳು ಬಂಧಿಸುವ ಸಾಧ್ಯತೆ ಇದೆ. ಕಳೆದ ಮೂರು ದಿನಗಳಿಂದ ಸುಜಾತಾ ಭಟ್ ವಿಚಾರಣೆ ಎದುರಿಸುತ್ತಿದ್ದಾರೆ.
ಅನನ್ಯ ಭಟ್ ನನ್ನ ಮಗಳೆಂದು ಬಿಂಬಿಸಿದ್ದ ಸುಜಾತಾ ಭಟ್ ಸುಳ್ಳು ದೂರು ನೀಡಿ ಪೊಲೀಸರ ದಿಕ್ಕು ತಪ್ಪಿಸಿದ ಹಿನ್ನೆಲೆಯಲ್ಲಿ, ಸುಳ್ಳು ದೂರು ಸುಳ್ಳು ಸಾಕ್ಷಿ ಸೃಷ್ಟಿಸಿದ ಆರೋಪದ ಮೇಲೆ SIT ಪೋಲಿಸರು ಸುಜಾತಾ ಭಟ್ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.